ಬಳ್ಳಾರಿ

ಜೆಡಿಎಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ

ಜೆಡಿಎಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ

ಲೋಕದರ್ಶನ ವರದಿ 

ಬಳ್ಳಾರಿ 02 : ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಮಹಾತ್ಮಾ ಗಾಂದೀಜಿಯವರ ಅವರ ಜಯಂತೋತ್ಸವನ್ನು ಶನಿವಾರರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಜೆಡಿಎಸ್ ನಗರ ಘಟಕ ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿ ಸ್ಮರಿಸಿದರು.  

ಈ ಸಂದರ್ಭದಲ್ಲಿ ಜೆಡಿಎಸ್  ಮುಖಂಡರಾದ ಮುನ್ನಾ ಭಾಯಿ, ಬಂಡೇಗೌಡ, ವಂಡ್ರಿ, ಶ್ರೀನಿವಾಸ್, ಕೊರ್ಲಗುಂದಿ ಪಂಪಾಪತಿ, ಮುಕ್ಕಣ್ಣ, ಪುಷ್ಪಾವತಿ, ಭವಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ