ಗಾಂಧಿ ಜಯಂತಿ: ವಿದ್ಯಾರ್ಥಿಗಳಿಗೆ ಬೆಂಚ್ಗಳ ವಿತರಣೆ
ಲೋಕದರ್ಶನ ವರದಿ
ಬಳ್ಳಾರಿ 02: ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿಯ ಅಂಗವಾಗಿ ರೋಟರಿ ಕ್ಲಬ್ ಆಫ್ ಕಂಟೋನ್ಮೆಂಟ್ ಬಳ್ಳಾರಿ ಇವರಿಂದ ರೋಟರಿ ಫೌಂಡೇಷನ್ ಯೋಜನೆಯಿಂದ ತಾಲ್ಲೂಕಿನ ಬೆಳಗಲ್ಲು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ 20 ಬೆಂಚ್ಗಳನ್ನು ವಿತರಿಸಲಾಯಿತು.
ಶಾಲಾ ಮುಖ್ಯ ಗುರುಗಳಾದ ಇ.ಎಲ್.ಲತಾ, ಶಿಕ್ಷಕ ಕೆ.ಗೋಪಿ, ಎಂ.ಕುಮಾರಸ್ವಾಮಿ, ಎಸ್.ಆನಂದ್, ವನಜಾಕ್ಷಿ, ಕೆ.ಅಶ್ವತ್ಥನಾರಾಯಣರಾವ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷ ಜಿ.ಮಧುಸೂಧನ್ ಅವರು, ರೋಟರಿ ಕ್ಲಬ್ ವತಿಯಿಂದ ಅವಶ್ಯಕತೆಗನುಗುಣವಾಗಿ ಜಿಲ್ಲೆಯ ಹಲವಾರು ಶಾಲೆಗಳಿಗೆ ಉಪಕರಣಗಳನ್ನು ವಿತರಿಸಿದ್ದು, ಅದೇ ರೀತಿ ಬೆಣಕಲ್ಲು ಶಾಲೆಗೆ ಇಂದು ಬೆಂಚ್ಗಳನ್ನು ವಿತರಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಗುರು ಮ್ಯಾಥ್ಯೂ, ವಿಷ್ಣುವರ್ಧನ್ರೆಡ್ಡಿ, ವೆಂಕಟರಾಘವನ್, ಶ್ರೀಧರ್ .ಜೆ., ಮಹಾರುದ್ರಗೌಡ, ಬಿ.ರಾಮಕೃಷ್ಣ ಅವರುಗಳು ಉಪಸ್ಥಿತರಿದ್ದರು.