ಗದಗ ಜಿಲ್ಲಾ ಬಿಎಸ್ಪಿ ಕಾರ್ಯಕರ್ತರಿಂದ ಬೈಕ್ ಜಾತಾ ಮೂಲಕ ಪ್ರತಿಭಟನೆ
ಮುಂಡರಗಿ 25: ಮನೋವಾದಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈ ದೇಶವನ್ನು 77 ವರ್ಷ ಆಡಳಿತ ನಡೆಸಿದರು. ಹಾಗೂ ಕರ್ನಾಟಕ ರಾಜ್ಯವು 1956ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ನಂತರ 1973 ನವೆಂಬರ್ 1ರಂದು ಕರ್ನಾಟಕ ರಾಜ್ಯ ಏಕೀಕರಣವಾಗಿ ಇಂದಿಗೆ 50 ವರ್ಷ ಗತಿಸಿಹೋದರೂ ಕೂಡಾ ಮುಂಡರಗಿ ಪಟ್ಟಣದಲ್ಲಿ ಸರ್ಕಾರಿ ಕನ್ನಡ ಪ್ರೌಢಶಾಲೆ ಇರುವುದಿಲ್ಲ. ಹಾಗೂ ಸುಸಜ್ಜಿತವಾದ ಆಡಳಿತ ನೀಡದಿರುವುದು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲಂಘನೆ ಮಾಡಿರುವ ಶಿಕ್ಷಣ ಕ್ಷೇತ್ರದ ಗದಗ ಜಿಲ್ಲಾ ಉಪನಿರ್ದೇಶಕರು 2023-24ರ ಸಾಲಿನ ಮುಂಡರಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭತಿ9 ಮಾಡಿಕೊಳ್ಳುವಲ್ಲಿ ತಾರತಮ್ಯ ಮಾಡುತ್ತಿರುವುದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಅ.31 ರಂದು ಮಂಗಳವಾರ ಬೆಳಿಗ್ಗೆ 11ಗಂಟೆಗೆ ಮುಂಡರಗಿಯ ಕೊಪ್ಪಳ ಕ್ರಾಸ್ನಿಂದ ಗದಗ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೈಕ್ ಜಾತಾ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಸಂಯೋಜಕ ಬಸವರಾಜ ನವಲಗುಂದ ಪ್ರಕಟನೆಯಲ್ಲಿ ತಿಳಿಸಿದರು.