ಗುರುದ್ವಾರ ರಕಾಬ್ ಗಂಜ್ ಗೆ ಅಚ್ಚರಿಯ ಭೇಟಿ ನೀಡಿದ ಪ್ರಧಾನಿ ಮೋದಿ
ನವದೆಹಲಿ, ಡಿಸೆಂಬರ್ 20 :ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಿಗ್ಗೆ ಗುರುದ್ವಾರ ರಕಾಬ್ ಗಂಜ್ ಗೆ ಅಚ್ಚರಿಯ ಭೇಟಿ ನೀಡಿ ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.'' ಇಂದು ಬೆಳಿಗ್ಗೆ ತಾವು ಗುರುದ್ವಾರ ರಕಾಬ್ ಗಂಜ್ ಸಾಹಿಬ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ, ಅಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ ಪ್ರಾರ್ಥೀವ ಶರೀರವನ್ನು ಅಂತ್ಯಕ್ರಿಯೆ ಮಾಡಲಾಗಿದೆ. ತಾವು ಅವರಿಂದ ಆಶೀರ್ವಾದ ಪಡೆದಿದ್ದೇನೆ. ವಿಶ್ವದಾದ್ಯಂತ ಲಕ್ಷಾಂತರ ಜನರು ಗುರು ತೇಜ್ ಬಹದ್ದೂರ್ ಜಿ ಅವರ ದಯೆಯಿಂದ ಪ್ರೇರಿತರಾದ ರೀತಿಯಲ್ಲೇ ತಾವು ಕೂಡ ಅವರಿಂದ ಸ್ಪೂರ್ತಿ ಪಡೆದಿದ್ದೇನೆ, '' ಎಂದು ಭೇಟಿಯ ನಂತರ ಪ್ರಧಾನಿ ಟ್ವೀಟ್ ಮಾಡಿದ್ದಾರೆ.ಇದು ಗುರು ಸಾಹಿಬ್ ಅವರ ವಿಶೇಷ ಕೃಪೆಯಾಗಿದೆ ಎಂದು ಪ್ರಧಾನಿ ಹೇಳಿದರು.
''ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ಗುರು ತೇಜ್ ಬಹದ್ದೂರ್ ಜಿ ಅವರ 400 ನೇ ಪ್ರಕಾಶ್ ಪರ್ವದ ವಿಶೇಷ ಸಂದರ್ಭವನ್ನು ನಾವು ಕಾರ್ಯಕ್ರಮದ ರೂಪದಲ್ಲಿ ಆಚರಿಸುತ್ತೇವೆ” ಎಂದು ತಿಳಿಸಿದ್ದಾರೆ.ಈ ಸಂದರ್ಭವನ್ನು ಐತಿಹಾಸಿಕ ರೀತಿಯಲ್ಲಿ ಗುರುತಿಸಲು ಮತ್ತು ಶ್ರೀ ಗುರು ತೇಜ್ ಬಹದ್ದೂರ್ ಅವರ ಆದರ್ಶಗಳನ್ನು ಆಚರಿಸಲು ಅವರು ಕರೆ ನೀಡಿದರು."ಈ ಸಂದರ್ಭವನ್ನು ಐತಿಹಾಸಿಕ ರೀತಿಯಲ್ಲಿ ಗುರುತಿಸೋಣ ಮತ್ತು ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ ಆದರ್ಶಗಳನ್ನು ಪಾಲಿಸೋಣ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.ಗುರು ತೇಜ್ ಬಹದ್ದೂರ್ ಅವರ ಶಹೀದಿ ದಿವಸ್ ಅಂಗವಾಗಿ ಶನಿವಾರ ಸಂದೇಶವೊಂದರಲ್ಲಿ ಪ್ರಧಾನಿ ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ ಜೀವನವು ಧೈರ್ಯ ಮತ್ತು ಸಹಾನುಭೂತಿಯನ್ನು ತೋರಿಸುತ್ತದೆ. ಅವರ ಶಹೀದಿ ದಿವಸ್ ಸಂದರ್ಭದಲ್ಲಿ ತಾವು ಮಹಾನ್ ಶ್ರೀ ಗುರು ತೇಜ್ ಬಹದ್ದೂರ್ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ, ನ್ಯಾಯಯುತ ಮತ್ತು ಸಮಗ್ರ ಸಮಾಜಕ್ಕಾಗಿ ಅವರ ದೂರದೃಷ್ಟಿಯನ್ನು ನೆನಪಿಸಿಕೊಳ್ಳುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.