ಮನರಂಜನೆ

ಕೋವಿಡ್ 19: ಖ್ಯಾತ ಗಾಯಕ ಜಿ. ಆನಂದ್ ಸಾವು

ಕೋವಿಡ್ 19: ಖ್ಯಾತ ಗಾಯಕ ಜಿ. ಆನಂದ್ ಸಾವು

ಹೈದರಾಬಾದ್, ಮೇ 07: ಇತ್ತೀಚಿಗೆ ಕೊರೋನಾಗೆ ಚಿತ್ರ ಜಗತ್ತಿನ ಹಲವು ಗಣ್ಯರು ಬಲಿಯಾಗಿದ್ದಾರೆ. ಇದೀಗ ದಕ್ಷಿಣದ ಚಿತ್ರರಂಗ ಮತ್ತೋರ್ವ ಹಿರಿಯ ಗಾಯಕ ಜಿ ಆನಂದ್ ಮೃತಪಟ್ಟಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾಗಿದ್ದ 67 ವರ್ಷದ ತೆಲುಗಿನ ಖ್ಯಾತ ಗಾಯಕ ಆನಂದ್ ಅವರ ಆಕ್ಸಿಜನ್ ಪ್ರಮಾಣ 55ಕ್ಕೆ ಇಳಿಕೆಯಾಗಿತ್ತು. ಆಕ್ಸಿಜನ್ ಮತ್ತು ವೆಂಟಿಲೇಟರ್ ಗಾಗಿ ಪರದಾಡಿದ್ದರಾದರೂ ಸಿಗದ ಕಾರಣ ಆಂಧ್ರಪ್ರದೇಶದ ತಿರುಮಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.ಆಕ್ಸಿಜನ್ ಮತ್ತು ವೆಂಟಿಲೇಟರ್ ಗಾಗಿ ಅವರ ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಆರ್ ಆರ್ ಆರ್ ಸಿನಿಮಾ ನಿರ್ಮಾಪಕರು ಮತ್ತು ಮೈತ್ರಿ ಮೂವಿಸ್ ಗೆ ಮನವಿ ಮಾಡಿಕೊಂಡಿದ್ದರು. ವೆಂಟಿಲೇಟರ್ ಸಿಗುವಷ್ಟರಲ್ಲಿಯೇ  ಆನಂದ್ ಕೊನೆಯುಸಿರೆಳೆದಿದ್ದಾರೆ.


ಸುದ್ದಿ ಓದಿ