ಜಿ.ಹಮೀದ್ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ
ಬಳ್ಳಾರಿ ನವೆಂಬರ್ 07: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಮಹಮ್ಮದ್ ರಫೀಕ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದ ಜಿ.ಹಮೀದ್ ಭಾಷಾರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಶರ್ಮಸ್ ಸಾಬ್, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷ ಅಸುಂಡಿ ನಾಗರಾಜ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಅಯಾಜ್ ಅಹಮ್ಮದ್, ಕಾಂತಿನೋಹ ವಿಲ್ಸನ್, ಕಾರ್ಯದರ್ಶಿಗಳಾದ ಜೈ ಕುಮಾರ್ ನಾಯುಡು, ಅಲಿವೇಲು ಸುರೇಶ್, ಗೋನಾಳ್ ನಾಗಭೂಷಣ ಗೌಡ, ಶಮೀಮ್ ಜಕ್ಲಿ, ಮೇಟಿ ದಿವಾಕರ್ ಗೌಡ, ಕೆ.ತಾಯಪ್ಪ, ಮೊದಲಾದವರು ಉಪಸ್ಥಿತರಿದ್ದರು.