ಅಂಗನವಾಡಿ ಕೇಂದ್ರಗಳಿಗೆ ಪೂರ್ಣಾವದಿ ಚಾಲನೆ
ಮುಂಡಗೋಡ: ಕೋವಿಡ್ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ದಿನದಲ್ಲಿ ಕೇವಲ 2 ಘಂಟೆ ಮಾತ್ರ ಕಾರ್ಯನಿರ್ವಸುತ್ತಿದ್ದ ಅಂಗನವಾಡಿ ಕೇಂದ್ರಗಳು ಪೂರ್ಣಾವದಿ ಕಾರ್ಯನಿರ್ವಹಿಸಲು ಸೋಮವಾರ ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಚಾಲನೆ ನೀಡಲಾಯಿತು.
ತಾಲೂಕಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದೀಪಾ ಬಂಗೇರ ಮಕ್ಕಳಿಗೆ ಪುಷ್ಪ ಗುಚ್ಚ ನೀಡುವ ಮೂಲಕ ಮಕ್ಕಳನ್ನು ಬರ ಮಾಡಿಕೊಂಡು ಮಾತನಾಡಿ, ಕೋವಿಡ್ ಹೆಚ್ಚಾಗಿದ್ದರಿಂದ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರ್ಕಾರದ ಆದೇಶದಂತೆ ಅಂಗನವಾಡಿ ತರಗತಿ ಸಮಯವನ್ನು ಬೆಳಿಗ್ಗೆ 10 ರಿಂದ 12 ಘಂಟೆವರೆಗೆ ಸೀಮಿತಗೊಳಿಸಿ ಗರ್ಭಿಣಿ ಮಹಿಳೆ ಹಾಗೂ ಮಕ್ಕಳಿಗೆ ವಿತರಿಸುವ ಆಹಾರ ಸಾಮಗ್ರಿಗಳನ್ನು ಮನೆಗೆ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಅಂಗನವಾಡಿ ಕೇಂದ್ರಗಳು ಬೆಳಿಗ್ಗೆ 9.30 ರಿಂದ 4 ಘಂಟೆವರೆಗೆ ಕಾರ್ಯನಿರ್ವಹಿಸಲಿದ್ದು, 3 ರಿಂದ 6 ವರ್ಷದ ಅಂಗನವಾಡಿ ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಅಂನವಾಡಿ ಕೇಂದ್ರದಲ್ಲಿಯೇ ಆಹಾರವನ್ನು ಬೇಯಿಸಿ ವಿತರಿಸಲಾಗುತ್ತದೆ ಎಂದು ಹೇಳಿದರು.