ಪಾಕಿಸ್ತಾನದ ಪೇಶಾವರದಿಂದ ಮುಂಬೈ ಅಂತಿಮ ಪಯಣದ ವರೆಗೆ …!
ಮುಂಬೈ : ಪಾಕಿಸ್ತಾನದ ಪೇಶಾವರದಲ್ಲಿ ಹುಟ್ಟಿ ಮುಂಬೈನಲ್ಲಿ ಅಂತಿಮ ಯಾತ್ರೆ ಮುಗಿಸಿದ ಬಾಲಿವುಡ್ ಹಿರಿಯ ನಟನನ್ನು ಬಣ್ಣದ ಲೋಕದಲ್ಲಿ ಸಿನಿಮಾ ದಂತಕಥೆ ಎಂದೇ ಕರೆಯಲಾಗುತ್ತಿದೆ.
ಅದರಲ್ಲೂ ವಿಶೇಷವಾಗಿ ನಟರಾದ ನಟರಾಜ ಕಪೂರ್ ದೇವಾನಂದ್ ಮತ್ತು ದಿಲೀಪ್ ಕುಮಾರ್ ಅವರನ್ನು ಭಾರತೀಯ ಚಿತ್ರರಂಗದಲ್ಲಿ ತ್ರಿಮೂರ್ತಿ ಎಂದೇ ಕರೆಯಲಾಗುತ್ತಿತ್ತು.
1944 ರಲ್ಲಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ನಟ ದಿಲೀಪ್ ಕುಮಾರ್ ನಂತರ ಹಿಂದೆ ತಿರುಗಿ ನೋಡಿದ್ದೇ ಇಲ್ಲ, ಏಳು ಬೀಳಿನ ನಡುವೆಯೂ 50 ವರ್ಷಗಳ ಬಣ್ಣದ ಬದುಕಿನಲ್ಲಿ ಪ್ರೇಕ್ಷಕರಿಗೆ ಮಾತ್ರವಲ್ಲ ನಟರಿಗೂ ಒಬ್ಬ ರೋಲ್ ಮಾಡೆಲ್ ಹಾಗೂ ಆದರ್ಶಪ್ರಾಯರಾಗಿ ಬದುಕಿನಲ್ಲಿ ಕಾಣಿಸಿಕೊಂಡರು.ಗುರುತಿಸಿಕೊಂಡವರು. ಚಿತ್ರರಂಗದ ಉತ್ತುಂಗದಲ್ಲಿದ್ದಾಗ ತಮಗಿಂತ 20 ವರ್ಷ ಚಿಕ್ಕವರಾಗಿದ್ದ ನಟಿ ಸಾಯಿರಾಬಾನು ಅವರನ್ನು ವಿವಾಹವಾಗಿದ್ದರು.
ಮುಹಮ್ಮದ್ ಯೂಸುಫ್ ಖಾನ್ ಹೆಸರಿನ ಇವರು ಬಾಲಿವುಡ್ ನಲ್ಲಿ 'ದಿಲೀಪ್ ಕುಮಾರ್' ಎಂದೇ ಖ್ಯಾತರಾಗಿದ್ದರು.
ಪೇಶಾವರದಲ್ಲಿ 1922ರ ಡಿಸೆಂಬರ್ 11ರಂದು ಜನಿಸಿದ ದಿಲೀಪ್ ಕುಮಾರ್ ನಂತರದಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ತಮ್ಮ ಅದ್ಭುತ ನಟನೆಗಾಗಿ ಅವರು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾ ಸಾಹೇಬ್ ಫಾಲ್ಕೆ ಗೌರವಗಳಿಗೂ ಭಾಜನರಾಗಿದ್ದರು
ರಾಜ್ಯಸಭಾ ಸದಸ್ಯರೂ ಆಗಿದ್ದ ದಿಲೀಪ್ ಕುಮಾರ್ ಖ್ಯಾತ ನಟಿ ಸಾಯಿರಾ ಬಾನು ಅವರನ್ನು 1966ರಲ್ಲಿ ವಿವಾಹವಾಗಿದ್ದರು
ಜ್ವಾರ್ ಭಾಟಾ (1944) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ಸುಮಾರು ಐದು ದಶಕಗಳ ಸಿನಿಮಾ ಪಯಣದಲ್ಲಿ 65 ಸಿನೆಮಾಗಳಲ್ಲಿ ನಟಿಸಿದ್ದಾರೆ.
ಅಂದಾಝ್ (1949), ಆನ್ (1952), ದಾಗ್ (1952), ದೇವ್ದಾಸ್ (1955), ಆಜಾದ್ (1955) ಹಾಗೂ ಐತಿಹಾಸಿಕ ಚಿತ್ರ ಮುಘಲ್-ಎ-ಅಝಮ್ (1960), ಗಂಗಾ ಜಮುನಾ (1961), ರಾಮ್ ಔರ್ ಶ್ಯಾಮ್ (1967) ದಿಲೀಪ್ ನಟನೆಯ ಪ್ರಮುಖ ಚಿತ್ರಗಳಾಗಿವೆ