ಕ್ಷಯರೋಗದ ಉಚಿತ ತಪಾಸಣೆ, ಅಭಿಯಾನ ಯಶಸ್ವಿ
ಆಲಮೇಲ 19 : ಪಟ್ಟಣ ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಸುಮಾರು 130 ಕ್ಷಯ ರೋಗಿಗಳ ಎಕ್ಸರೇ ಪರೀಕ್ಷೆಯ ಸದುಪಯೋಗ ಪಡಿಸಿಕೊಂಡಿದ್ದಾರೆ.ಕ್ಷಯ ಮುಕ್ತ ಭಾರತ ಅಭಿಯಾನದಡಿ ಸುಮಾರು 100 ದಿನಗಳ ಕಾಲ - ಪಟ್ಟಣ ಸೇರಿ ಸಮುದಾಯ ಕೇಂದ್ರಕ್ಕೆ ಒಳಪಡುವ ಕ್ಷಯ ರೋಗಿಗಳನ್ನು ಗುರುತಿಸಿ ಅವ-ರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಈ ಕಾಯಿಲೆ ಸಾಮಾನ್ಯವಾಗಿದ್ದು ಸುಮಾರು 6 ತಿಂಗಳ ಕಾಲ ಮಾತ್ರೆಗಳನ್ನು ಪಡೆದರೆ ಸಂಪೂರ್ಣ ಗುಣಮುಖರಾಗುತ್ತಾರೆ, ಮದ್ಯದಲ್ಲೇ ಮಾತ್ರೆಗಳನ್ನು ಪಡೆಯದಿದ್ದರೆ ಅಡ್ಡ ಪರಿಣಾಮ ಉಂಟಾಗುತ್ತದೆ.2 ವಾರಕ್ಕೂ ಹೆಚ್ಚು ಕೆಮ್ಮ ಜ್ಞರ ಕಾಣಿಸಿಕೊಂಡಲ್ಲಿ ಯಾವದೇ ಕಾರಣಕ್ಕೂ ನಿಲಕ್ಷ ಮಾಡಬಾರದು, ತಕ್ಷಣವೇ ಸ್ಥಳಿಯ ಆಸ್ಪತ್ರೆಗಳಿಗೆ ತೆರಳಿ ಕ್ಷಯ ರೋಗದ ಪರೀಕ್ಷೆ ಮಾಡಿಕೊಳ್ಳಬೇಕು ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ.ಸಂಪೂರ್ಣ ಮಾತ್ರೆಗಳನ್ನು ಉಚಿತ ನೀಡಲಾಗುವು ಎಂದು ಅಭಿಯಾನದಲ್ಲಿ ಅರಿವು ಮೂಡಿಸಲಾಯಿತು.