ಉಚಿತ ಟೈಲರಿಂಗ್ ತರಬೇತಿ: ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ
ಲೋಕದರ್ಶನ ವರದಿ
ಕಂಪ್ಲಿ 03: ಕುಶಲತೆಯನ್ನು ಟೈಲರಿಂಗ್ನಲ್ಲಿ ಬಳಸಿಕೊಳ್ಳುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ಪುರಸಭೆ ಸದಸ್ಯ ಆರ್.ಆಂಜಿನೇಯ ಹೇಳಿದರು.
ಇಲ್ಲಿನ ಎಂ.ಡಿ.ಕ್ಯಾಂಪಿನ ಸಮುದಾಯ ಭವನದಲ್ಲಿ ಶನಿವಾರ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನಾ ಹಮ್ಮಿಕೊಂಡಿದ್ದ ಉಚಿತ ಟೈಲರಿಂಗ್ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ವಸ್ತ್ರ ವಿನ್ಯಾಸ ಹೊಲಿಗೆಯಲ್ಲಿ ಆಧುನಿಕತೆಯ ವೈವಿಧ್ಯಮಯ ಕರಕುಶಲತೆ ಅಳವಡಿಸಿಕೊಳ್ಳುವಲ್ಲಿ ಮಹಿಳಾ ಟೈಲರ್ ಜಾಗೃತಿ ತೋರಬೇಕು ಎಂದು ಮಹಿಳೆಯರಿಗೆ ಸಲಹೆ ನೀಡಿದರು. ಟೈಲರಿಂಗ್ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿ ಮೊದಲ ಸ್ಥಾನ ಪಡೆದ ಶ್ರಾವಣಿ, ದ್ವಿತೀಯ ಸ್ಥಾನಗಳಿಸಿದ ಹೊನ್ನೂರ್ಬೀ ಅವರಿಗೆ ಬಹುಮಾನ ವಿತರಿಸಲಾಯಿತು. ಉಚಿತ ಟೈಲರಿಂಗ್ ತರಬೇತಿ ಪಡೆದುಕೊಂಡ 28ಜನ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಟೈಲರ್ ತರಬೇತುಗಾರ್ತಿ ಬಡಿಗೇರ ಅಮೀನಾ, ಪುರಸಭೆ ಮಾಜಿ ಅಧ್ಯಕ್ಷ ಪಿ.ಬ್ರಹ್ಮಯ್ಯ, ಪ್ರಮುಖರಾದ ಎನ್.ಗಂಗಣ್ಣ, ಎನ್.ಬುಜ್ಜಿಕುಮಾರ್, ಶಾರೂಕ್, ಕೊಡಿದಲರಾಜು, ಕೆ.ಹೊನ್ನೂರ್ಪ ಸೇರಿ ಇತರರಿದ್ದರು.