ಬಳ್ಳಾರಿ

ಬಡ ಮಹಿಳೆಯರಿಗೆ ಉಚಿತ ಸೀರೆ ವಿತರಣೆ

ಬಡ ಮಹಿಳೆಯರಿಗೆ ಉಚಿತ ಸೀರೆ ವಿತರಣೆ

ಲೋಕದರ್ಶನ ವರದಿ 

ಬಳ್ಳಾರಿ 09: ನಗರದ ಬಂಡಿಹಟ್ಟಿಯ ರಾಮ ನಗರದಲ್ಲಿನ ಶ್ರೀ ಸೋಮಣ್ಣ ಹಾಸ್ಟೆಲ್ ಹತ್ತಿರ ಶನಿವಾರ ಭೋವಿ ವಡ್ಡರ ಸಮುದಾಯದ ನೂರಕ್ಕೂ ಹೆಚ್ಚಿನ  ಬಡ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು ಕೇಂದ್ರಿಯ ಅಬಕಾರಿ ಇನ್ಸ್‌ ಪೆಕ್ಟರ್ ವಿ. ಉದಯ್ ಕುಮಾರ್  ಅವರು ವಿತರಣೆ ಮಾಡಿದರು. 


ಇದೇ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿಗಳಾಗಿ ಇತ್ತೀಚಿಗೆ ನೇಮಕವಾದ ಎನ್‌.ಮಂಜುನಾಥ್ ಪ್ರಸಾದ್ ಅವರಿಗೆ ಶುಭವಾಗಲಿ ಎಂದು ಹಾರೈಸಿ ನಮ್ಮ ಸಮುದಾಯದ ಯುವ ಜನರಿಗೆ ಸ್ಪೂರ್ತಿ ಆಗಿದ್ದಾರೆ. ದೇವರು ಅವರಿಗೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ಅಧಿಕಾರ ಕೊಡಲೆಂದು ಆ  ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. 


ಬಡ ಮಹಿಳೆಯರಿಗೆ ಉಚಿತ ಸೀರೆ ವಿತರಣೆ  ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿವೃತ್ತ ತಹಶೀಲ್ದಾರ್ ಕರಿಯಪ್ಪ ಕಲ್ಲೂರು ಮಾತನಾಡಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಗಳಾಗಿ ನೇಮಕವಾಗುವ ಮೂಲಕ ಮಂಜುನಾಥ್ ಪ್ರಸಾದ್ ಅವರು ಸಮುದಾಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು. 


ಬಿಜೆಪಿ ಮುಖಂಡ ಅನೂಪ್ ಕುಮಾರ್ ಮಾತನಾಡಿ ರಾಜ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಯವರ ಪ್ರಧಾನ ಕಾರ್ಯದರ್ಶಿಗಳಾಗಿ  ಮಂಜುನಾಥ್ ಪ್ರಸಾದ್ ಅವರು ನೇಮಕ ಆಗಿದ್ದಕ್ಕೆ ಅಭಿನಂದನೆಗಳು ಅವರಿಗೆ ಆಯುಷ್ಯ ಅರೋಗ್ಯ ಚೆನ್ನಾಗಿರಲಿ ಎಂದು ಆಶಿಸುತ್ತೇನೆ ಎಂದರು. 


ಈ ಸಂದರ್ಭದಲ್ಲಿ ನಿವೃತ್ತ ತಹಶೀಲ್ದಾರ್ ಕರಿಯಪ್ಪ ಕಲ್ಲೂರು ಅವರನ್ನು ಸನ್ಮಾನಿಸಲಾಯಿತು. ಸ್ವರೂಪ್ ಸೇರಿದಂತೆ ಸಮುದಾಯದ ಇತರೆ ಮುಖಂಡರು ಇದ್ದರು. 


ಸುದ್ದಿ ಓದಿ