ಉಚಿತ ಸಸಿ ವಿತರಣೆ
ಮುಂಡಗೋಡ:ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾಲೂಕಿನ ಹುಲಿಹೊಂಡ ಗ್ರಾಮದ ಕೃಷಿ ಕಾಡು ಕರ್ತಾರ ಮತ್ತು ಸಮಗ್ರ ಕೃಷಿ ಪ್ರಶಸ್ತಿ ವಿಜೇತ ಬಸವರಾಜ ನಡುವಿನಮನಿ ಅವರ ತೋಟದಲ್ಲಿ ಅತ್ತಿವೇರಿ ಬಸವಧಾಮದ ಶ್ರೀಬಸವೇಶ್ವರಿ ಮಾತಾ ಅವರ ದಿವ್ಯ ಸಾನಿಧ್ಯದಲ್ಲಿ ರೈತರಿಗೆ, ಸ್ವ-ಸಹಾಯ ಸಂಘದ ಮಹಿಳೆಯರಿಗೆ ಉಚಿತವಾಗಿ ಸಸಿ ವಿತರಣೆ ಮಾಡಲಾಯಿತು.
ಭೂವಿಕಾಸ ಪ್ರತಿಷ್ಠಾನ ಸಂಸ್ಥೆ ಮುಖ್ಯಸ್ಥ ಮಹದೇಶ್ವರ ಲಿಂಗದಾಳ ಕಾರ್ಯಕ್ರಮ ಉದ್ಘಾಟಿಸಿದರು. ಆರ್.ಜೆ.ಬೆಳ್ಳೆನವರ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ಕಾಮನಳ್ಳಿ ಮತ್ತು ಬಡಿಗೇರಿ ಉಪಸ್ಥಿತರಿದ್ದರು.