ಡಾ. ಪ್ರಭುಗೌಡ ಪಾಟೀಲ ಸೇವೆ ಅನನ್ಯ
ಪ.ಪೂ.ಶ್ರೀ. ರಾಮಲಿಂಗಯ್ಯ ಸ್ವಾಮೀಜಿ ಹೇಳಿಕೆ ಽ ಚಬನೂರ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ
ತಾಳಿಕೋಟಿ 30: ಖ್ಯಾತ ನೇತ್ರ ತಜ್ಞ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಪ್ರಭುಗೌಡ .ಬಿ. ಪಾಟೀಲ ಅವರ ಸೇವೆ ಅನನ್ಯವಾಗಿದೆ ಎಂದು ಚಬನೂರಿನ ಖ್ಯಾತ ಜ್ಯೋತಿಷ್ಯ ಹಾಗೂ ರಾಜ್ಯ ಪ್ರಶಸಿ ಪುರಸ್ಕೃತ ಪ. ಪೂ. ರಾಮಲಿಂಗಯ್ಯ ಮಹಾಸ್ವಾಮಿಗಳು ತಿಳಿಸಿದರು.
ಅಮೋಘಸಿದ್ದೇಶ್ವರ ಜಾತ್ರೋತ್ಸವ ಅಂಗವಾಗಿ ಚಬನೂರ ಗ್ರಾಮದಲ್ಲಿ ವಿಜಯಪುರ ಅನುಗ್ರಹ ಆಸ್ಪತ್ರೆ ನೇತ್ರತಜ್ಞ ಡಾ. ಪ್ರಭುಗೌಡ ಬಿ ಪಾಟೀಲ ಅವರ ಆರೋಗ್ಯ ಅಭಿಯಾನದಡಿ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಡಾ. ಪ್ರಭುಗೌಡರು ಬಡವರ ಪಾಲಿನ ಆಶಾಕಿರಣವಾಗಿದ್ದಾರೆ ವ್ಯಾಪಾರಿ ಮನೋಭಾವ ಹೊಂದದೆ ನಿಸ್ವಾರ್ಥ ಮನೋಭಾವದಿಂದ ಇಂಥಹ ಉಚಿತ ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದರು.
ನೇತ್ರತಜ್ಞ ಡಾ. ಪ್ರಭುಗೌಡ ಅವರು ಮಾತನಾಡಿ ಕಳೆದ 20 ವರ್ಷಗಳಿಂದ ಅನುಗ್ರಹ ಸಂಸ್ಥೆಯ ಹೆಸರಿನಲ್ಲಿ ವಿಜಯಪೂರ ಹಾಗೂ ಕಲಬುರ್ಗಿ ನಗರದಲ್ಲಿ ಆಸ್ಪತ್ರೆ ಸ್ಥಾಪಿಸಿ ಸುಮಾರು 10ಲಕ್ಷ ಕ್ಕೂ ಅಧಿಕ ರೋಗಿಗಳನ್ನು ಪರೀಕ್ಷಿಸಿ, ಸುಮಾರು 1.30ಲಕ್ಷ ಜನರ ನೆತ್ರ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. 12ವರ್ಷಗಳಿಂದ ನನ್ನ ಹುಟ್ಟೂರಾದ ಚಬನೂರಿನಲ್ಲಿ ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ಇಂತಹ ಉಚಿತ ಶಿಬಿರಗಳನ್ನು ಆಯೋಜಿಸಿ ಗ್ರಾಮಿಣ ಭಾಗದ ಬಡ ಜನರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಈ ಶಿಬಿರದಲ್ಲಿ ಸುಮಾರು 2ಸಾವಿರ ಜನರು ಭಾಗವಹಿಸಿದ್ದು ಇದರಲ್ಲಿ 1200 ಜನ ನೇತ್ರ ರೋಗಿಗಳಾಗಿದ್ದು ಇವರಲ್ಲಿ 610 ಜನರನ್ನು ಶಸ್ತ್ರಚಿಕಿತ್ಸೆಗಾಗಿ ಆಯ್ಕೆಮಾಡಲಾಗಿದ್ದು ಸುಮಾರು 800 ಜನ ತಮ್ಮ ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ತಪಾಸಣೆಗೆ ಒಳಪಟ್ಟರು ಇವರೆಲ್ಲರನ್ನು ಬಿ. ಎಲ್. ಡಿ. ಇ. ಆಸ್ಪತ್ರೆಯ ಖ್ಯಾತ ವೈದ್ಯರ ತಂಡ ತಪಾಸಣೆ ನಡೆಸಿತು.
ಈ ಸಂದರ್ಭದಲ್ಲಿ ಅನುಗ್ರಹ ಹಾಗೂ ಬಿ. ಎಲ್. ಡಿ. ಇ. ಸಂಸ್ಥೆಯ ಖ್ಯಾತ ವೈದ್ಯರುಗಳಾದ ಡಾ. ಮಾಲಿನಿ ಪ್ರಭುಗೌಡ ಪಾಟೀಲ್, ಡಾ. ಸಂತೋಷ ಪಾಟೀಲ್, ಡಾ. ರೋಹಿಣಿ ಸಂತೋಷ ಪಾಟೀಲ್, ಡಾ. ಬಿ. ಆರ್. ಪಾಟೀಲ, ಡಾ. ಆನಂದ ಗನ್ನೂರ, ಮಾಹಾಂತೇಶ ಹುಜರಾತಿ, ಸಂಗಮೇಶ ಪಾಟೀಲ್, ಮಲ್ಲು ಗಡೇದ, ಗಣ್ಯರಾದ ಸಂಗನಗೌಡ ಬ ಪಾಟೀಲ್, ಮಂಜುನಾಥ ಕವಡಿಮಟ್ಟಿ, ಮುತ್ತುಗೌಡ ಪಾಟೀಲ್, ಮಶಾಕಸಾಬ ದೊಡಮನಿ, ಮತ್ತೀತರರು ಉಪಸ್ಥಿತರಿದ್ದರು.