ಮುಂಡರಗಿ

ಅ.16ರಂದು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಅ.16ರಂದು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಮುಂಡರಗಿ 15 : ಪಟ್ಟಣದಲ್ಲಿ ನೂತನವಾಗಿ ನಿಮರ್ಾಣಗೊಂಡ ಮಲ್ಟಿಸ್ಪೆಷಾಲಿಟಿ ಪೂಜಾರ ಹಾಸ್ಪಿಟಲ್ ಉದ್ಘಾಟನೆ ಪ್ರಯುಕ್ತವಾಗಿ ಬೃಹತ್ ಉಚಿತ ಆರೋಗ್ಯ ಶಿಬಿರದ ಹಾಗೂ ರಕ್ತದಾನ ಶಿಬಿರದ ಪ್ರಚಾರ ರಥದ ಸಂಚಾರಕ್ಕೆ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ್ ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಆರೋಗ್ಯ ಶಿಬಿರದಲ್ಲಿ ಪ್ರತಿಯೊಬ್ಬರೂ ಈ ಆಸ್ಪತ್ರೆಯ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಹಾಗೂ ಇಂದು ಹಲವಾರು ರೋಗಗಳ ಹಾವಳಿ ಹೆಚ್ಚಾಗಿರುವ್ಯದರಿಂದ ಸಾರ್ವಜನಿಕರು ಸ್ವಚ್ಛತೆ ಹಾಗೂ ಸುರಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ಜಾಗೃತವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಸಿದ್ಧ ವೈದ್ಯರಾದ ಡಾ.ಲಕ್ಷ್ಮಣ ಪೂಜಾರ ಮಾತನಾಡಿ, ಅ.16ರಂದು ರವಿವಾರದಂದು ಮುಂಡರಗಿ ನಗರದಲ್ಲಿ ನೂತನವಾಗಿ ನಿಮರ್ಾಣಗೊಂಡ ಮಲ್ಟಿಸ್ಪೇಷಾಲಿಟಿ ಪೂಜಾರ ಹಾಸ್ಪಿಟಲ್ ಕಟ್ಟಡದ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಶುಗರ್, ಬಿ.ಪಿ, ಇಸಿಜಿ, ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ಹ್ಲದಯ ರೋಘ, ಚರ್ಮರೋಗ, ನರರೋಗ, ಎಲುಬು & ಕೀಲು, ಸ್ತ್ರೀ-ರೋಗ ಸಮಸ್ಯೆ, ಮೂತ್ರ ಸಮಸ್ಯೆ ಹಾಗೂ ಕಿಡ್ನಿ ಸ್ಟೋನ್ಸ್ ಮುಂತಾದ ಖಾಯಿಲೆಗಳಿಗೆ ನುರಿತ ವೈದ್ಯರ ಸಹಾಯದೊಂದಿಗೆ ಬೃಹತ್ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹೀಗಾಗಿ ಮುಂಡರಗಿ ಹಾಗೂ ಸಮಸ್ತ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

ಶಿಬಿರದ ಪ್ರಚಾರ ರಥದ ಪಯಣವು ಶಿರೋಳ, ಬಸಾಪೂರ, ಹಾರೋಗೇರಿ, ಹಿರೆವಡ್ಡಟ್ಟಿ, ಡೋಣಿ, ನಾರಾಯಣಪುರ, ಡಂಬಳ, ಪೇಠಾಲೂರ, ವೆಂಕಟಾಪೂರ, ಹಳ್ಳಿಕೇರಿ, ಯಕ್ಸಾಸಪುರ, ಹೈತಾಪೂರ, ಮೇವುಂಡಿ, ಬರದೂರ, ಕವಲೂರ, ಹಟ್ಟಿ, ಬೆಳಗಟ್ಟಿ, ಅಳವಚಿಡಿ, ನೆಲೋಗಿಪೂರ, ಬೋಚನಹಳ್ಳಿ, ಹಲವಾಗಲಿ, ಕ್ಯಾಸಲಾಪುರ, ಹೈದರನಗರ ಹಾಗೂ ಹೆಸರೂರ ಮಾರ್ಗವಾಗಿ ಸಂಚರಿಸುವುದು ಎಂದು ಪ್ರಕಟನೆಗೆ ತಿಳಿಸಿದರು.

ಸುದ್ದಿ ಓದಿ