ತಾಳಿಕೋಟಿ

ಗೊಟಖಂಡ್ಕಿ ಗ್ರಾಮದಲ್ಲಿ ಶ್ರೀಮನ್ ಮಹಾದೇವಿ ಜಾತ್ರೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರೋಗ್ಯವಂತ ಸಮಾಜದಿಂದಲೇ ಅಭಿವೃದ್ಧಿ ಸಾಧ್ಯ: ಡಾ. ಪ್ರಭುಗೌಡ

ಗೊಟಖಂಡ್ಕಿ ಗ್ರಾಮದಲ್ಲಿ ಶ್ರೀಮನ್ ಮಹಾದೇವಿ ಜಾತ್ರೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರೋಗ್ಯವಂತ ಸಮಾಜದಿಂದಲೇ ಅಭಿವೃದ್ಧಿ ಸಾಧ್ಯ:  ಡಾ. ಪ್ರಭುಗೌಡ


ತಾಳಿಕೋಟಿ: ರೋಗಗ್ರಸ್ಥ ಸಮಾಜದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಯಾವುದೇ ಒಂದು ಸಮಾಜ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಆ ಸಮಾಜದಲ್ಲಿರುವ ಜನರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕಾಗಿರುವುದು ಅಗತ್ಯವಾಗಿದೆ ಎಂದು ಖ್ಯಾತ ನೇತ್ರ ತಜ್ಞ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಕಾಂಗ್ರೇಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.  

ತಾಲೂಕಿನ ಗೊಟಖಂಡ್ಕಿ ಗ್ರಾಮದಲ್ಲಿ ಶ್ರೀಮನ್ ಮಹಾದೇವಿ ತಾಯಿಯವರ ಜಾತ್ರೋತ್ಸವದ ಅಂಗವಾಗಿ ಗ್ರಾಮದ ಸರ್ಕಾರಿ ಮಾದರಿ ಶಾಲೆಯಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ ಹಾಗೂ ಡಾ. ಶಂಕರಗೌಡ ಪಾಟೀಲ ಹೃಧಯಾಲಯ ಮತ್ತು ಆರೋಗ್ಯಧಾಮ ವಿಜಯಪೂರ ಇವರ ಸಹ ಭಾಗಿತ್ವದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರವನ್ನು ಉಧ್ಘಾಟಿಸಿ ಅವರು ಮಾತನಾಡಿದರು. 

ಇಂದು ನಮ್ಮ ಬಳಿ ಸಂಪತ್ತು ಸಾಧನಾನುಕೂಲತೆಗಳಿಗೆ ಯಾವುದೆ ರೀತಿಯ ಕೊರತೆ ಇಲ್ಲ, ಆದರೆ ನಮ್ಮ ಬದುಕಿನಲ್ಲಿ ಶಾಂತಿ ಹಾಗೂ ನೆಮ್ಮದಿ ಎಂಬುವುದಿಲ್ಲವಾಗಿದೆ. ಇಂದು ನಾವು ಅತಿ ಹೆಚ್ಚು ರೋಗರುಜಿನುಗಳಿಗೆ ತುತ್ತಾಗುತ್ತಿದ್ದೇವೆ. ಭಾರತ ವಿಶ್ವದ ಅತಿ ದೊಡ್ಡ ಹೃದ್ರೋಗ ಹಾಗೂ ಮಧುಮೇಹ ರೋಗಿಗಳ ದೇಶವಾಗುತ್ತಿದೆ. ಪ್ರತಿ ಎರಡು ನಿಮಿಷಕ್ಕೊಂದು ಹೃಧಯಾಘಾತ ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಬದಲಾದ ಜೀವನ ಶೈಲಿ, ಆಹಾರ ಪದ್ದತಿ, ಹಾಗೂ ಯಾಂತ್ರಿಕ ಬದುಕಾಗಿದೆ. ದೈಹಿಕ ಶ್ರಮವಿಲ್ಲದೆ ಆಯಿಷಾರಾಮಿ ಬದುಕಿನಿಂದಾಗಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಈ ವ್ಯಾಧಿಯು ಗ್ರಾಮೀಣ ಭಾಗಕ್ಕೂ ವ್ಯಾಪಿಸಿದೆ. ಈ ಕಾರಣಕ್ಕಾಗಿಯೇ ನಾವು ಗ್ರಾಮೀಣ ಭಾಗದಲ್ಲಿ ಇಂಥಹ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದೇವೆ ಎಂದರು. 

ಕೆಪಿಸಿಸಿ ಸದಸ್ಯ ಬಿ. ಎಸ್‌.ಪಾಟೀಲ(ಯಾಳಗಿ) ಮಾತನಾಡಿ ಗ್ರಾಮೀಣ ಭಾಗದ ಜನರಲ್ಲಿ ಅರೋಗ್ಯದ ಕುರಿತು ಹೆಚ್ಚು ಜಾಗೃತೆ ಇಲ್ಲದಿರುವುದರಿಂದ ಹಾಗೂ ತೀವ್ರ ಆರ್ಥಿಕ ಸಮಸ್ಯೆಗಳಿಂದಾಗಿ ಅವರು ಹಲವಾರು ಗಂಭಿರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರಲ್ಲಿ ಜಾಗೃತಿ ಮೂಡಿಸುವಲ್ಲಿ ಇಂಥಹ ಶಿಬಿರಗಳು ಸಹಾಯಕಾರಿಯಾಗಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. 

ಹೃಧಯರೋಗ ತಜ್ಞ ಡಾ. ಶಂಕರಗೌಡ ಪಾಟೀಲ(ಯಾಳಗಿ) ಮಾತನಾಡಿ ಇಂದು ಹೃಧಯ ರೋಗವು ವಯಸ್ಸಿನ ಮಿತಿಇಲ್ಲದೆ ಎಲ್ಲರನ್ನೂ ಭಾಧಿಸುತ್ತೀದೆ. ಇದಕ್ಕೆ ಪ್ರಮುಖವಾಗಿ ನಮ್ಮ ನೀವನಶೈಲಿಯಲ್ಲಾದ ಬದಲಾವಣೆ ದುರಭ್ಯಾಸಗಳು ಹಾಗೂ ಆಹಾರ ಪದ್ದತಿಯಾಗಿದೆ. ಇಂದು ನಾವು ತಿವೃ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದೆವೆ. ಸಾಮಾನ್ಯವಾಗಿ ಎದೆನೋವು ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೆ ಸಮೀಪದ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.  

ಈ ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು 250 ಜನರು ನೇತ್ರ ತಪಾಸಣೆ ಮಾಡಿಕೊಂಡರು ಅದರಲ್ಲಿ 40 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆಮಾಡಲಾಯಿತು. ಹಾಗೂ ಸುಮಾರು 200 ಜನರು ಹೃದಯ ರೋಗ ತಪಾಸಣೆಗೆ ಹಾಗೂ 50 ಜನರು ಚರ್ಮರೋಗ ಹಾಗೂ ಸ್ರೀ ರೋಗ ತಪಾಸಣೆಗೆ ಒಳಗಾದರು. 

ಈ ಸಮಯದಲ್ಲಿ ವೇ.ಮೂ. ಶಿವಯ್ಯ ಹಿರೇಮಠ, ಕೆಪಿಸಿಸಿ ಮಾಜಿ ಸದಸ್ಯ ಸುರೇಶಬಾಬುಗೌಡ ಬಿರಾದಾರ, ರಾಮನಗೌಡ ಬಿರಾದಾರ, ಶಿವನಗೌಡ ಬಿರಾದಾರ, ಮಧುಗೌಡ ಪಾಟೀಲ, ಮಾಜಿ ಸೈನಿಕ ರಾಮನಗೌಡ ಬಿರಾದಾರ, ಶಂಕರಗೌಡ ಪಾಟೀಲ, ಡಾ. ಶ್ರೀದೇವಿ ಪಾಟೀಲ, ಡಾ. ಸ್ವಾತಿ, ಡಾ, ಶಾಂತಾ ಇಬ್ರಾಹಿಂಪೂರ, ಬಾಲು ತಳವಾರ, ರುಧ್ರಗೌಡ ಬಿರಾದಾರ(ಅಸ್ಕಿ), ಡಾ. ಬಲವಂತ್ರಾಯಗೌಡ ನಡಹಳ್ಳಿ, ಸಾಹೇಬಗೌಡ ಬಿರಾದಾರ, ಗ್ರಾ. ಪಂ ಸದಸ್ಯರಾದ ಶ್ರೀಕಾಂತ ಚೌಧರಿ, ಶಂಕ್ರ​‍್ಪ ಹರಿಜನ, ಎಸ್‌ಡಿಎಮ್‌ಸಿ ಅಧ್ಯಕ್ಷ ಬಸವರಾಜ ಕೊಳ್ಯಾಳ, ಶಂಕರಗೌಡ ಪಾಟೀಲ, ಚಿದಾನಂದಗೌಡ ಬಿರಾದಾರ, ಮಲ್ಲು ಆನೇಸೂರ, ಬಸವರಾಜ ಶಿಂಗನಳ್ಳಿ, ಪ್ರಭುಗೌಡ ಬಿರಾದಾರ(ಪೀರಾಪೂರ) ದತ್ತಾತ್ರೇಯ ಹೊಸಮಠ, ದೀಲಿಪ, ನಿಂಗನಗೌಡ ಬಿರಾದಾರ ಇದ್ದರು. 


ಸುದ್ದಿ ಓದಿ