ಕೋವಿಡ್ ರೋಗಿಗಳ ಬಳಕೆಗಾಗಿ ವ್ಯಾಪೋರೈಸರ್ಸ್ ಉಚಿತವಾಗಿ ವಿತರಣೆ
ಬಳ್ಳಾರಿ 17: ವೀಕಿಂಗ್ಸ್ ಲೇಡೀಸ್ ಸರ್ಕಲ್ :ಇವರ ಪರವಾಗಿ ಬಳ್ಳಾರಿ ಸ್ಕೌಟ್ಸ್ ಮತ್ತು ಗೈಡ್ ಫೆಲೋಶಿಪ್ನ ಅದ್ಯಕ್ಷ ಪೋಲಾ ವಿಕ್ರಮ್ ಅವರು ದಿ. 15ರಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಆಕ್ಸಿಜನ್ ಬ್ಯಾಂಕ್ ನ ಬಡ ಜನರ ಉಪಯೋಗಕ್ಕಾಗಿ 20 ವ್ಯಾಪೋರೈಸರ್ಸ್ಗಳನ್ನು ಬಳ್ಳಾರಿಯ ಭಾರತೀಯ ರೆಡ್ಕ್ರಾಸ್ ಸಂಸ್ಥೆಗೆ ಜಿಲ್ಲಾ ಕಛೇರಿಯಲ್ಲಿ ಉಚಿತವಾಗಿ ದೇಣಿಗೆ ನೀಡಿರುತ್ತಾರೆ. ಕೋವಿಡ್ ದೃಡಪಟ್ಟ ರೋಗಿ ಆಸ್ಪತ್ರೆಯಿಂದ ವಾಸಿಯಾದನಂತರ ಅವರಿಗೆ ಉಸಿರಾಟದ ತೊಂದರೆ ಇದ್ದರೆ, ಅವರು ವೈದ್ಯರ ಸಲಹೆ ಮೇರೆಗೆ ಆಮ್ಲಜನಕ ಅಂದರೆ ಆಕ್ಸಿಜನ್ನ ಅವಶ್ಯಕತೆ ಇದ್ದಲ್ಲಿ ನಮ್ಮ ರೆಡ್ ಕ್ರಾಸ್ ವತಿಯಿಂದ ಆಕ್ಸಿಜನ್ ಕಾನ್ಸೇಟ್ರೇಟರ್ಗಳನ್ನು 10 ದಿನಗಳ ಕಾಲ ಉಚಿತವಾಗಿ ನೀಡಲಾಗುವುದು. ಇದರ ಜೊತೆಗೆ ವ್ಯಾಪೋರೈಸರ್ಗಳನ್ನು ನೀಡಿದರೆ ಕರೋನಾ ಸೋಂಕಿತರಿಗೆ ತುಂಬಾ ಉಪಯೋಗವಾಗಲಿದೆ ಎಂಬ ಉದ್ದೇಷದಿಂದ 20 ವ್ಯಾಪೋರೈಸರ್ಸ್ಗಳನ್ನು ಆಕ್ಸೀಜನ್ ಬ್ಯಾಕ್ನ ಕೋಆಡರ್ಿನೇಟರ್ರಾದ ವಿಷ್ಣು ಕುಮಾರ್, ಸವರ್್ ವಾಲೇಂಟಿಯರ್, ಇವರಿಗೆ ಒಪ್ಪಿಸಿರಿರುತ್ತಾರೆ, ಇದೇ ಸಂದರ್ಭದಲ್ಲಿ ಎಂ.ಎ.ಷಕೀಬ್, ಕಾರ್ಯದಶರ್ಿಗಳು, ರೆಡ್ ಕ್ರಾಸ್ ಸಂಸ್ಥೆ, ಮತ್ತು ಏಖಉಈ, ಹಾಗೂ ರೆಡ್ಕ್ರಾಸ್ ಸಂಸ್ಥೆಯ ಸವರ್್ ವಾಲೇಂಟಿಯರ್ಸ್ ಹರಿಶಂಕರ್, ಬಾರಿಕರ ಗಣೇಶ್, ಪ್ರದೀಪ್, ಮೊದಲಾದವರು ಉಪಸ್ಥಿತರಿದ್ದರು