ಯಾತ್ರಾ ಮಹೋತ್ಸವದ ನಿಮಿತ್ಯ ಉಚಿತ ರಕ್ತದಾನ ತಪಾಸಣೆ
ಮುಂಡರಗಿ 22: ರಕ್ತದಾನವು ಶ್ರೇಷ್ಠವಾದ ಧಾನವಾಗಿದೆ. ಆರೋಗ್ಯವಂತರೆಲ್ಲರೂ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳನ್ನು ರಕ್ಷಿಸಿಕೊಳ್ಳಬಹುದಾದ ಮಹತ್ವದ ದಾನವಾಗಿದೆ. ಇಂದಿನ ಯುವತರುಣರು ರಕ್ತದಾನ ಮಾಡಬೇಕು. ಇದರಿಂದ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಕುಕನೂರಿನ ಶ್ರೀ ಮಹಾದೇವ ದೇವರು ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ 154ನೇ ಯಾತ್ರಾ ಮಹೋತ್ಸವದ ನಿಮಿತ್ಯ ಶ್ರೀಮಠದ ಕಲ್ಯಾಣ ಮಂಟಪದಲ್ಲಿ ಗದಗ ಅಂಬಿಕಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಏರಿ್ಡಸಿದ ಉಚಿತ ರಕ್ತದಾನ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಕಾಲೇಜು ವಿದ್ಯಾರ್ಥಿಗಳಲ್ಲಿ ರಕ್ತದಾನ ನೀಡುವ ಬಗ್ಗೆ ಜಾಗೃತಿಯನ್ನು ಮೂಡುತ್ತಿವೆ. ಒಬ್ಬ ದಾನಿಯಿಂದ ಪಡೆದ ರಕ್ತದಿಂದ ರಕ್ತದ ಘಟಕಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿ ಅನೇಕ ವ್ಯಕ್ತಿಗಳ ಪ್ರಾಣ ಉಳಿಸಬಹುದಾಗಿದೆ. ಇದರಿಂದ ವ್ಯಕ್ತಿಗೆ ಯಾವುದೇ ಹಾನಿಯಿಲ್ಲ. ಆದರೆ ಬೇಡಿಕೆಗೆ ತಕ್ಕಂತೆ ರಕ್ತವನ್ನು ಪೂರೈಸಲು ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಇರುವ ಭಯ ಆತಂಕ. ಹೀಗಾಗಿ ಪ್ರತಿಯೊಬ್ಬರು ರಕ್ತದಾನಿಯಿಂದ ರಕ್ತವನ್ನು ಪಡೆಯುವ ಮೊದಲು ವಯಸ್ಸು, ತೂಕ, ರಕ್ತದೊತ್ತಡ, ಹಿಮೋಗ್ಲೋಬಿನ್ ಪ್ರಮಾಣ ಹಾಗೂ ಆರೋಗ್ಯದ ಸ್ಥಿತಿಯನ್ನು ಪರೀಶೀಲಿಸಿ ಎಲ್ಲವೂ ಸರಿಯಿದ್ದಲ್ಲಿ ಮಾತ್ರ ರಕ್ತ ಪಡೆಯಲು ಮುಂದಾಗುತ್ತಾರೆ. ಹೀಗಾಗಿ 18 ರಿಮದ 60 ವರ್ಷದೊಳಗಿನ ಪ್ರತಿಯೊಬ್ಬ ಯುವಕರು ರಕ್ತದಾನವನ್ನು ಮಾಡಲು ಮುಂದಾಗಬೇಕು ಇದರಿಂದ ತಮ್ಮ ಆರೋಗ್ಯದ ರಕ್ಷಣೆಯನ್ನೂ ಸಹ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಈ ವೇಳೆ ಡಾ.ಎ.ಎನ್.ಶಿವಪುರ, ಡಾ.ರೋಹಿತ್ ಚವ್ಹಾಣ್ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಸಾಯಂಕಾಲದವರೆಗೆ ಸುಮಾರು 50 ಜನತೆ ರಕ್ಷದಾನವನ್ನು ಸ್ವೀಕರಿಸಲಾಯಿತು. ಮಾಡಿದರು. ಈ ವೇಳೆ ಹಿರೆವಡ್ಡಟ್ಟಿಯ ಶ್ರೀ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು, ನಾಗೇಶ ಹುಬ್ಬಳ್ಳಿ, ಮಂಜುನಾಥ ಮುಧೋಳ, ಎಸ್.ಚಿ.ಚಕ್ಕಡಿಮಠ, ಮಂಜುನಾಥ ಇಟಗಿ, ಬಸವರಾಜ ಅಸೂಂಡಿ, ದೇವಪ್ಪ ಇಟಗಿ, ನಾಗರಾಜ ಮುರಡಿ ಇತರರು ಒದ್ದರು.