ಬಳ್ಳಾರಿ

ಉಚಿತ ಲಸಿಕಾ ಕಾರ್ಯಕ್ರಮ

ಉಚಿತ ಲಸಿಕಾ ಕಾರ್ಯಕ್ರಮ

ಬಳ್ಳಾರಿ 16: ಜಿಲ್ಲಾ ಆರೋಗ್ಯ ಇಲಾಖೆಯು ರಂಗತೋರಣದ ಸಹಕಾರದೊಂದಿಗೆ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ದಿ. 16ರಂದು ನಗರದ ಡಾ. ರಾಜಕುಮಾರ ರಸ್ತೆಯ ಸಾಯಿಬಾಬಾ ಗುಡಿ ಹತ್ತಿರದ ದತ್ತಸಾಯಿ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ಕೋವಿಡ್ ಲಸಿಕಾ ಅಭಿಯಾನಕ್ಕೆ ಹಿರಿಯ ರಂಗಕರ್ಮಿಗಳಾದ ರಮೇಶಗೌಡ ಪಾಟೀಲ ರವರು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ವಕೀಲರಾದ ಕೆ.ಆರಿ​‍್ವಜಯಲಕ್ಷ್ಮಿ , ರಂಗತೋರಣದ ಸಹ ಕಾರ್ಯದರ್ಶಿ ಅಡವಿಸ್ವಾಮಿ , ಕೆ. ಆರ್ ಮಲ್ಲೇಶಕುಮಾರ , ಪ್ರವೀಣ ನಾಯಕ, ಮತ್ತಿತರರು ಹಾಜರಿದ್ದರು. ನಂತರ ಕಲಾವಿದರು ಕಲಾವಿದರ ಕುಟುಂಬದವರು ಹಾಗೂ ದತ್ತಸಾಯಿನಗರ ಕಾಲೋನಿಯ ಸಾರ್ವಜನಿಕರು ಕೋವಿ ಶೀಲ್ಡ ಹಾಗೂ ಕೋವ್ಯಾಕ್ಸಿನ್ ಎರಡು ಲಸಿಕೆಗಳ ಸದುಪಯೋಗ ಪಡೆದುಕೊಂಡರು. 


ಸುದ್ದಿ ಓದಿ