ಬಳ್ಳಾರಿ

ಉಚಿತ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ

ಉಚಿತ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ

ಬಳ್ಳಾರಿ 11: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ (ಅಃ ಖಖಇಖಿಋ) ಆವರಣದಲ್ಲಿ 30ದಿನಗಳ ಹೋಲಿಗೆ ತರಬೇತಿ ಕಾರ್ಯಕ್ರಮ ದಿ. 10ರಂದು ನಡೆಸಲಾಗಿತ್ತು.  

ತರಬೇತಿ ಸಂಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದ ಮುಖ್ಯ ಅಥಿತಿಗಳಾಗಿ ನವೀನ ಕುಮಾರ ಎಲ್‌ಡಿಎಮ್, ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಬಳ್ಳಾರಿ. ಇವರು ಕಾರ್ಯಕ್ರಮವನ್ನು ಉದ್ದೇಶಿಸಿ  ಮಹಿಳೆಯರು ಬಟ್ಟೆ ಹೋಲೆಯುವ ಸ್ವ-ಉದ್ಯೋಗ ಮಾಡಿಕೊಂಡು  ಸೃಜನಾತ್ಮಕವಾಗಿ ಹೊಸ ಹೊಸ ವಿನ್ಯಾಸದ ಬಟ್ಟೆ ಹೋಲೆಯುವ ಕೌಶಲ್ಯವನ್ನು ಬೆಳಸಿಕೊಂಡು ನಿಮ್ಮ ವೃತ್ತಿಯಲ್ಲಿ ಆಳವಡಿಸಿಕೊಳ್ಳಬೇಕು. ಈಗಿನ ಕಾಲದಲ್ಲಿ ಮಹಿಳೆಯರು ವಿಧ ವಿಧ ಬಟ್ಟೆ ಹಾಕಿಕೊಳ್ಳುವದು ಒಂದು ಟ್ರಂಡ್‌ಯಾಗಿದೆ ಅದಕ್ಕೆ ತಕ್ಕಂತೆ ಬಟ್ಟೆ ಹೋಲೆಯುವದನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.  

ಶರಣಬಸವ ರೆಡ್ಡಿ ಡಿ, ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬಳ್ಳಾರಿ, ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಕೌಟುಂಬಿಕ ಜೀವನ ಸುಗಮವಾಗಿರುತ್ತದೆ. ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಈ ಹೋಲಿಗೆ ತರಬೇತಿ ನಿಮಗೆ ಸಹಕಾರಿಯಾಗಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮಂಜುಳಾ ಸಂಪನ್ಮೂಲ ವ್ಯಕ್ತಿಗಳು, ಜಡೇಪ್ಪ,  ಮಹಮ್ಮದ ನಿಸಾರ, ಉಪನ್ಯಸಕರು. ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಕಿರಣ ಕುಮಾರ ಹಾಗೂ ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳು ಭಾಗವಹಿಸಿದ್ದರು. ತರಬೇತಿ ಪೂರ್ಣಗೊಳಿಸಿದ 29ಜನ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. 


ಸುದ್ದಿ ಓದಿ