ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 17: ನಾನು ಯಾವುದೇ ಅಧಿಕಾರದ ಆಸೆಯಿಂದ ಈ ಕ್ಷೇತ್ರದಲ್ಲಿ ಬಂದು ಜನರ ಸೇವೆ ಮಾಡುತ್ತಿಲ್ಲ, ನನ್ನ ಸಹೋದರ ದಿ. ಸಿ.ಎಸ್.ಶಿವಳ್ಳಿಯವರಿಗೆ ನಿಕಟ ಕ್ಷೇತ್ರವಾಗಿರುವುದರಿಂದ ಅವರ ಆಸೆಯದಂತೆ ಈ ಕ್ಷೇತ್ರದ ಜನರ ಸೇವೆ ಮಾಡಲು ಮುಂದಾಗಿರುವುದಾಗಿ ಕೆಪಿಸಿಸಿ ಸದಸ್ಯ ಷಣ್ಮುಖಪ್ಪ ಶಿವಳ್ಳಿ ಹೇಳಿದರು.
ಬಂಕಾಪೂರ ಪಟ್ಟಣದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ದಿ.ಸಿ.ಎಸ್.ಶಿವಳ್ಳಿಯವರ ಸ್ಮರಣಾರ್ಥ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಕಳೆದ ವರ್ಷ 151 ಜೋಡಿ ಉಚಿತ ವಿವಾಹವನ್ನು ಮಾಡಲು ಸಂಕಲ್ಫ ಮಾಡಿಕೊಂಡು ಕಾರ್ಯ ಪ್ರವೃತ್ತರಾಗಿದ್ದೇವು. ಆದರೆ ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಸಾಮೂಹಿಕ ವಿವಾಹಕ್ಕೆ ಅನುಮತಿ ನೀಡದೇ ಇರುವುದರಿಂದ ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ನಾವು ನಿಗದಿ ಪಡೆಸಿದ ಮೂಹುರ್ತದಲ್ಲಿಯೇ ಅವರವರ ಮನೆಯಮುಂದೇಯೇ ಕಲ್ಯಾಣ ಮಹೋತ್ಸವವನ್ನು ಮಾಡಿಕೊಳ್ಳಲು ಸಹಾಯ ಸಹಕಾರ ನೀಡಿದ್ದೇವು. ನನಗೆ ಯಾವುದೇ ಅಧಿಕಾರ ಇಲ್ಲದ್ದಿದ್ದರೂ ಕೋವಿಡ್ ಸಮಯದಲ್ಲಿ ಬಡವರಿಗೆ ಉಚಿತವಾಗಿ ದವಸ ದಾನ್ಯಗಳ ಕಿಟ್ ವಿತರಣೆ, ಅಂಬುಲೇನ್ಸ್ ಸೇವೆ, ಶವ ಸಂಸ್ಖಾರಕ್ಕೆ ದನಸಹಾಯ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈ ಕ್ಷೇತ್ರದ ಜನರ ಮನೆಯ ಮಗನಾಗಿ ಜನರ ಹೃದಯದಲ್ಲಿ ನೆಲೆಸಿರುವುದು ನನಗೆ ತೃಪ್ತಿ ತಂದಿದೆ. ಈ ಸೇವೆ ನಿರಂತರವಾಗಿ ಮುಂದುವರೆಯಲಿದೆ ಎಂದು ಹೇಳಿದರು.
ವಿದಾನಪರಿಷತ್ ಸದಸ್ಯ ಸೋಮಣ್ಣ ಬೆವಿನಮರದ ಮಾತನಾಡಿ, ದಿ.ಸಿ.ಎಸ್.ಶಿವಳ್ಳಿಯವರು ಹುಟ್ಟು ಹೋರಾಟಗಾರರಾಗಿ ಜನ ಸೇವೆಯೇನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರು. ಅವರ ಹೆಸರಿನಲ್ಲಿ ಅವರ ಸಹೋದರ ಷಣ್ಮುಖಪ್ಪ ಶಿವಳ್ಳಿಯವರು ನಡೆದಿರುವುದು ಸಂತಸದ ವಿಷಯವಾಗಿದ್ದು, ಅವರ ಸಮಾಜ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.
ಪಂಚಮಸಾಲಿ ಸಮಾಜದ ಮುಖಂಡ ಶಿವಾನಂದ ಬಾಗೂರ, ಬಂಕಾಪುರ ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಕೆಂಡದಮಠದ ಶ್ರೀ ಶಿದ್ದಯ್ಯ ಸ್ವಾಮೀಜಿ ಯವರು ಶಿವಳ್ಳಿಯವರ ಸಮಾಜ ಸೇವೆಯನ್ನು ಸ್ಮರಿಸಿ ಆಶೀರ್ವದಿಸಿದರು.
57 ಜೋಡಿ ವಿವಾಹ ಮಹೋತ್ಸವವು ಜರುಗಿದವು. ನೂತನ ವಧು,ವರರಿಗೆ ಮಾಂಗಲ್ಯ, ಕಾಲುಂಗುರ, ಸಿರೆ, ಕುಪ್ಪುಸ, ಬಟ್ಟೆ, ಬ್ಯಾಗ, ಕೊಡೆ ಸೇರಿದಂತೆ ಅವರವರ ಮನೆ ದೇವರಿಗೆ ತೆರಳಲು ದನಸಹಾಯ ನೀಡಿ ನೂತನ ವಧು,ವರರಿಗೆ ಷಣ್ಮುಖಪ್ಪ ಶಿವಳ್ಳಿಯವರು ಶುಭಕೋರಿದರು.
ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಡಿಕೆಶಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಎಂ.ಎಸ್.ಅಂಗಡಿ, ಧಾರವಾಡ ಮಾಜಿ ಜಿ.ಪಂ.ಅಧ್ಯಕ್ಷೆ ಶಾಂತವ್ವ ಶಿವಳ್ಳಿ, ಮಲ್ಲೇಶಪ್ಪ ಬಡ್ಡಿ, ಶಂಭುಲಿಂಗಪ್ಪ ಆಜೂರ, ಗದಿಗೇಪ್ಪ ಬಳ್ಳಾರಿ, ಮಹೇಶ ಪುಕಾಳೆ, ರಾಮಕೃಷ್ಠ ಆಲದಕಟ್ಟಿ, ಭೀರ್ಪ ಸಣ್ಣತಮ್ಮನವರ, ಶಂಕ್ರಣ್ಣ ಕಟಗಿ, ಸೋಮಂತ ಪುಜಾರ ಸೇರಿದಂತೆ ಇತರರು ಇದ್ದರು.