ಬಳ್ಳಾರಿ

ಹಸಿರುಗ್ರಾಮ ಅಭಿಯಾನದಡಿಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಚಿತ ಸಸಿ ನೆಡುವ ಕಾರ್ಯಕ್ರಮ

ಹಸಿರುಗ್ರಾಮ ಅಭಿಯಾನದಡಿಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಚಿತ ಸಸಿ ನೆಡುವ ಕಾರ್ಯಕ್ರಮ

ಬಳ್ಳಾರಿ: ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಇಬ್ರಾಹಿಂಪುರ ಗ್ರಾಮದ ಚಿಗುರು ಕಲಾ ತಂಡ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛಗ್ರಾಮ, ಹಸಿರುಗ್ರಾಮ ಅಭಿಯಾನದಡಿಯಲ್ಲಿ ಉಚಿತ ಸಸಿ ನೆಡುವ ಕಾರ್ಯಕ್ರಮವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು

   ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಾಂಟು ಪಾತರ್ ಅವರು ಮಾತನಾಡಿ ಈ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ 150 ಗಿಡಗಳನ್ನು ನೆಡವುದನ್ನು ನಾವು ಒಪ್ಪಿಕೊಂಡು ಇಂದು ಬಳ್ಳಾರಿ ಜಿಲ್ಲಾಕ್ರೀಡಾಂಗಣದಲ್ಲಿ 150 ಗಿಡಗಳನ್ನು ನೆಡಲಾಯಿತ್ತು. ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ, ಶಾಲೆಗಳಲ್ಲಿ ಮತ್ತು ದೇವಸ್ಥಾನದ ಅವರಣಗಳಲ್ಲಿ ಗಿಡಗಳನ್ನು ನೆಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ಹರಿಸಿಂಗ್ ರಾಥೊಡ್, ಜಿಲ್ಲಾ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಕಿ ಕೋಚರ್ ಎಂ. ಜಾಕೀರ್, ಚಿಗುರು ಕಲಾ ತಂಡದ ಅಧ್ಯಕ್ಷ ಎಸ್.ಎಂ ಹುಲಗಪ್ಪ, ವಂದೇ ಮಾತರಂ ಯುವಕ ಸಂಘದ ಅಧ್ಯಕ್ಷ ಅರುಣಕುಮಾರ್ ಹಾಗೂ ಅಮರೇಶ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ