ಹಿರೇಮಣಕಟ್ಟಿಯಲ್ಲಿ ಉಚಿತ ಕಾನೂನು ಶಿಬಿರ
ಶಿಗ್ಗಾವಿ 25: ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಉಚಿತ ಕಾನೂನು ನೆರವು ಶಿಬಿರ ಆಯೋಜಿಸಲಾಯಿತು. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ತಾಲೂಕು ಕಾನೂನಾ ಸೇವಾ ಸಮಿತಿ ವತಿಯಿಂದ ಪ್ಯಾನಲ್ ವಕೀಲರಾದ ಬಿ.ಜಿ. ರಾಗಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಕೀಲ ವಿ ಸಿ ಪಾಟೀಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಾಗಿದ್ದರು.