ಉಚಿತ ಆರೋಗ್ಯ ಕೌಶಲ್ಯ ಅಭಿವೃದ್ಧಿ ತರಬೇತಿ
ಬಳ್ಳಾರಿ 28: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಡಿಯಲ್ಲಿ ಇನಟರ್ನ್ ಅಡ್ವಸರ್ ಪ್ರವೇಟ್ ಲಿಮಿಟೆಡ್ ಹಾಗೂ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡ, ಬಳ್ಳಾರಿ ಇವರ ಸಹಯೋಗದಲ್ಲಿ ಬಳ್ಳಾರಿ ನಗರದ ದಾನಮ್ಮ ಸೂಪರ್ ಸ್ಪೇಸಾಲಿಟಿ ಅಸ್ಪತ್ರೆಯಲ್ಲಿ ಹತ್ತನೇ ತರಗತಿ ಮತ್ತು ಆದಕ್ಕೂ ಹೆಚ್ಚಿನ ವಿದ್ಯಾವಂತ ನಿರುದ್ಯೋಗ ಯುವಕ ಮತ್ತು ಯುವತಿಯವರಿಗಾಗಿ ಉಚಿತ ನಾಲ್ಕು ತಿಂಗಳ ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ ಕೋರ್ಸ್ನ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಬಳ್ಳಾರಿ ಸ್ಥಾನಿಕ ಸಂಪಾದಕ ಶಶಿಧರ ಮೇಟಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾವಂತ ನಿರುದ್ಯೋಗಿ ಗಳಿಗೆ ಈ ರೀತಿಯ ಜೀವನೋಪಾಯದ ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ ಇದನ್ನು ಸದುಪಯೋಗ ಮಾಡಿಕೊಂಡು ನಿಮ್ಮ ಜೀವನವನ್ನು ಸುಧಾರಿಸಿ ಕೊಳ್ಳಲು ಬಹಳ ಅನುಕೂಲದ ತರಬೇತಿಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನಪದ ಪರಿಷತ್ತಿನ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜರವರು ಮಾತನಾಡಿ, ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡ ಯುವಕ ಯುವತಿಯರಿಗಾಗಿ ಇಂತಹ ತರಬೇತಿ ನೀಡುತ್ತಿರುವುದು ತುಂಬಾ ಸಂತಸದ ಸಂಗತಿ ಇಂತ ಸಾಮಾಜಿಕ ಸೇವೆಯವಂತ ಕಾರ್ಯಕ್ರಮವನ್ನು ಕೆ ಹೊನ್ನೂರಸ್ವಾಮಿ ಮತ್ತು ಇತರರು ಆಯೋಜಿಸಿರುವುದು ತುಂಬಾ ಸಹಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಕಲಾವಿದರಾದ ರಮೇಶ್ಗೌಡ ಪಾಟೀಲ್, ಡಾ. ಮುದೇಗೌಡರ ಲಿಂಗರಾಜ್, ದಾನಮ್ಮ ಆಸ್ಪತ್ರೆಯ ಅಭಿಷೇಕ್, ಥರ್ಮೊಕೋಲ್ ಮಾಡಲ್ಸ್ ಉಮೇಶ್, ದೇವೆಂದ್ರ ಸಿರಿವಾರ ಮುಂತಾದವರಿದ್ದಾರೆ. ವಿಮ್ಸ್ ಆಸ್ಪತ್ರೆಯ ಶೂಶ್ರಕರಾದ ಪಿ.ಟಿ ಸಣ್ಣ ಮಾರೆಕ್ಕ ಇವರು ಲ್ಯಾಬ್ ಟೆಕ್ನಿಷಿಯನ್ನ ಕೋರ್ಸ್ನ ಬಗ್ಗೆ ತರಬೇತಿಯನ್ನು ನೀಡಿದರು. ಸುಮಾರು ಅರವತ್ತು ಜನ ಶಿಬಿರಾರ್ಥಿಗಳಿದ್ದರು. ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡದ ಕೆ ಹೊನ್ನೂರಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಉಮೇಶ್ರವರು ವಂದಿಸಿದರು.