ವೃದ್ಧಾಶ್ರಮದಲ್ಲಿ ಉಚಿತ ಕ್ಷೌರಸೇವೆ, ಅನ್ನದಾಸೋಹ
ಬಳ್ಳಾರಿ, ಮಾ.25: ಸವಿತಾ ಸಮಾಜ ಮೋಕಾ ಗ್ರಾಮ ಘಟಕದ ವತಿಯಿಂದ ಇಂದು ಸಂಗನಕಲ್ಲು ಗ್ರಾಮದ ಆದರ್ಶ ವೃದ್ಧಾಶ್ರಮದಲ್ಲಿ ಉಚಿತ ಕ್ಷೌರಸೇವೆ ನಡೆಸಿ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೋಕಾ ಸವಿತಾ ಸಮಾಜದ ಮುಖಂಡರಾದ ಎಂ.ಮಲ್ಲಿಕಾರ್ಜುನ ಅವರು ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಇದೇ ರೀತಿ ಇನ್ನು ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಸಕ್ತಿ ಹೊಂದಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಕರ್ನಾಟಕ ಪದವೀಧರ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷÀ ಕೆ.ಕೆ.ಹಾಳ್ ಗೋವರ್ಧನ್ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು.
ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಆರ್. ಶೇಖಣ್ಣ, ಹೈದ್ರಾಬಾದ್ ಕರ್ನಾಟಕ ಯುವ ಜಾಗೃತಿ ಸದಸ್ಯರಾದ ಸಣ್ಣಗೊಂಡ್ಲ ರಾಕೇಶ್, ಸಮಾಜದ ಮುಖಂಡರಾದ ಎರ್ರಿಸ್ವಾಮಿ, ನಾಗರಾಜ್, ರಾಮಕೃಷ್ಣ ಹಾಗೂ ಆದರ್ಶ ವೃದ್ಧಾಶ್ರಮದ ಆಧ್ಯಕ್ಷರಾದ ವೆಂಕೋಬಣ್ಣ ಹಾಜರಿದ್ದರು.