ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಾಯಕಲ್ ಅನುಮಾನ
ಮಾಂಜರಿ 6: ಸರಕಾರ ಮಕ್ಕಳನ್ನು ಶಾಲೆಯತ್ತ ಸೆಳೆಯಲು ರೂಪಿಸಿದ ಯೋಜನೆಗಳಲ್ಲಿ ಒಂದಾದ ಉಚಿತ ಸಾಯಕಲ್ ವಿತರಣೆ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸಿಗುವುದೆ ಎಂಬ ಪ್ರಶ್ನೆ ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ಕಾಡುತ್ತಿದೆ.
ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಕೋವಿಡ್ 19 ಮಾಹಾಮಾರಿ ಕಾಡಿದ್ದರಿಂದ ಇದೆ ಜನೇವರಿ ತಿಂಗಳಿಂದ ಪ್ರೌಢಶಾಲೆಗಳನ್ನು ಪ್ರಾರಂಭಿಸಿದ್ದು, ವಿದ್ಯಾರ್ಥಿಗಳು ಎಂದಿನಂತೆ ಶಾಲೆಗಳಿಗೆ ಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸುವುದೆ ಎಂಬ ಪ್ರಶ್ನೆ ಶಾಲಾ ಶಿಕ್ಷರನ್ನು ಹಿಡಿದು ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ,
ಮಾಧ್ಯಮಿಕ ಶಾಲೆಗಳಿಗೆ ಪ್ರತಿ ವರ್ಷದಂತೆ ಶಿಕ್ಷಣ ಇಲಾಖೆಯವರು 8 ನೇ ತರಗತಿ ವಿದ್ಯಾರ್ಥಿಗಳಿಗೆ ಕೋಡಮಾಡಬೇಕಿದ್ದ 20-21 ನೇ ಸಾಲಿನ ಉಚಿತ ಸೈಕಲ್ಗಳು ಈ ಸಾಲಿನಲ್ಲಿಕೋಡುತ್ತಾರಾ-ಇಲ್ಲವೂ ಎಂಬ ಪ್ರಶ್ನೆ ಗ್ರಾಮೀಣ ಪ್ರದೇಶದ ಪಾಲಕರಲ್ಲಿಕಾಡುತ್ತಿದೆ.
2006-07 ರಿಂದ ಸರಕಾರ ಕೊಡಮಾಡುವ ಉಚಿತ ಸೈಕಲ್ಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ತುಂಬಾ ಅನೂಕೂಲವಾಗಿದೆ. ಹೊಲ-ಗದ್ದೆಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗಂತೂ ತುಂಬಾ ಉಪಯುಕ್ತವಾಗಿದೆ. ಆದರೆ 14 ವರ್ಷಗಳನಂತರ ಉಚಿತ ಸೈಕಲ್ ವಿಳಂಬವಾಗುತ್ತಿದೆಯೂ, ಅಥವಾ ಈ ಸಾಲಿನಲ್ಲಿ ಸರಕಾರ ವಿತರಣೆ ಸ್ಥಗಿತಗೊಳಿಸಿದೆಯೋ ಎಂಬ ಪ್ರಶ್ನೆ ಕಾಡುತ್ತಿರುವುದು ಮಾತ್ರ ಸತ್ಯ!
ಪ್ರತಿವರ್ಷ ಸರಕಾರ ಉಚಿತ ಸೈಕಲ್ ವಿತರಿಸಲು ಮಾರ್ಚ ಅಥವಾ ಎಪ್ರೀಲ್ ತಿಂಗಳಲ್ಲಿ ಟೆಂಡರ್ ಕರೆಯುತ್ತಿದ್ದರು, ಸೈಕಲ್ಗಳು ತಯಾರಾದ ನಂತರ ಅಕ್ಟೋಬರ ಅಥವಾ ನವ್ಹೆಂಬರ ತಿಂಗಳಲ್ಲಿ ವಿತರಿಸುತ್ತಿದ್ದರು, ಆದರೆ ಕಳೆದ ಮಾರ್ಚ ಮತ್ತುಎಪ್ರೀಲ ತಿಂಗಳಲ್ಲಿ ಸಂಪೂರ್ಣವಾಗಿ ದೇಶ ಲಾಕಡೌನ್ ಇದ್ದ ಕಾರಣ ಸಾಯಕಲ್ ಟೆಂಡರ್ ಕರೆಯಲಾಗಿಲ್ಲ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಬಹುತೇಕ ವಿತರಣೆ ಆಗುವುದಿಲ್ಲಾ ಎಂಬದು ಸ್ಪಷ್ಟವಾಗಿದೆ.