ಉಚಿತ ವಧು ವರರ ಸದಸ್ಯತ್ವ ಅಭಿಯಾನ
ಲೋಕದರ್ಶನ ವರದಿ
ಕಂಪ್ಲಿ 09: ಇಲ್ಲಿನ ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕ ಹಾಗೂ ಕಲ್ಯಾಣ ಕರ್ನಾಟಕ, ಕಂಪ್ಲಿಯ ಮಂಜುನಾಥ ವರ್ಲ್ಡ್ ವಧು ವರರ ಮಾಹಿತಿ ಕೇಂದ್ರಗಳ ಸಹಯೋಗದಲ್ಲಿ ಗುರುವಾರ ಮಂಜುನಾಥ ವರ್ಲ್ಡ್ ವಧು ವರರ ಮಾಹಿತಿ ಕೇಂದ್ರದಲ್ಲಿ ಶಿಲ್ಪಿ ತತ್ಪುರುಷ ಬ್ರಹ್ಮರ್ಷಿ ಜಯಂತ್ಯೋತ್ಸವ, ನವರಾತ್ರಿ ಪ್ರಯುಕ್ತ ಉಚಿತ ವಧು ವರರ ಸದಸ್ಯತ್ವ ಮಾಹಿತಿ ಅಭಿಯಾನ ಜರುಗಿತು.
ವಿಶ್ವಕರ್ಮ ಜಗದ್ಗುರು ಆನೆಗುಂದಿ ಮೂಲ ಸಂಸ್ಥಾನ ಸರಸ್ವತಿ ಮೂಲಪೀಠದ ಶಿವಕುಮಾರ್ ಮಹಾಸ್ವಾಮೀಜಿ ಡಿ.ಹಿರೇಹಾಳ್ ಇವರು ಆಶೀರ್ವಚನ ನೀಡಿ, ನಾಡಗೀತೆ ಅವಧಿಯನ್ನು ಮೊಟಕುಗೊಳಿಸಲು ಅಭ್ಯಂತರವಿಲ್ಲ. ಆದರೆ, ‘ಡಂಕಣ ಜಕಣರ ನೆಚ್ಚಿನ ಬೀಡು’ ಶಿಲ್ಪಿಗಳ ಸಾಲುಗಳನ್ನು ಕೈಬಿಡಬಾರದು. ಶಿಲ್ಪಕಲೆಯ ಮೂಲಕ ನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಲು ಕವಿಗಳು ಹೆಣೆದ ಸಾಲುಗಳನ್ನು ಕೈಬಿಡಬಾರದು ಎಂದು ಒತ್ತಾಯಿಸಿದರು.
ಮಂಜುನಾಥ ವರ್ಲ್ಡ್ ವಧು ವರರ ಮಾಹಿತಿ ಕೇಂದ್ರ ಸಂಸ್ಥಾಪಕ ಎಂ.ಮಂಜುನಾಥ ಮಾತನಾಡಿ, ನವರಾತ್ರಿ ಪ್ರಯುಕ್ತ ವಧು ವರರ ಉಚಿತ ಸದಸ್ಯತ್ವ ಮಾಹಿತಿ ಅಭಿಯಾನವನ್ನು ಹಮ್ಮಿಕೊಂಡಿದೆ. ನವರಾತ್ರಿ ದಿನಗಳ ಕಾಲ ನಿತ್ಯ ವಧು ವರರ ಉಚಿತ ಸದಸ್ಯತ್ವ ಅಭಿಯಾನ ಜರುಗಲಿದ್ದು ವಧು ವರರು ಸದುಪಯೋಗಪಡಿಸಿಕೊಳ್ಳಬೇಕಿದೆ. ಶೀಘ್ರ ಕಲ್ಯಾಣಕ್ಕಾಗಿ 7411991318 ಸಂಖ್ಯೆಗೆ ವಧು ವರರ ಪೋಟೋ ಬಯೋಡಾಟಗಳನ್ನು ಕಳುಹಿಸಬೇಕಿದೆ. ಯಾವುದೇ ಶುಲ್ಕವಿರುವುದಿಲ್ಲ ಎಂದು ಹೇಳಿದರು. ಸಣಾಪುರ ತಾತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಧು ವರರ ಸದಸ್ಯತ್ವ ಅಭಿಯಾನದಲ್ಲಿ ವಧು ವರರ ನೇರಾ ಮುಖಾಮುಖಿ ಭಾಗವಹಿಸುವುದರಿಂದ ಪರಸ್ಪರ ಪರಿಚಯಕ್ಕೆ ಅನುಕೂಲವಾಗುತ್ತದೆ. ಸಂಬಂಧ ಬೆಳೆಸಲು ಅವಕಾಶ ದೊರಕುತ್ತದೆ. ಉಚಿತ ಸದಸ್ಯತ್ವ ಅಭಿಯಾನವನ್ನು ಸಮಾಜ ಬಾಂಧವರು ಬಳಸಿಕೊಳ್ಳಬೇಕು ಎಂದು ಹೇಳಿದರು.
ಶಿಲ್ಪಿ ತತ್ಪುರುಷ ಬ್ರಹ್ಮರ್ಷಿ ಜಯಂತ್ಯೋತ್ಸವ ನಿಮಿತ್ತ ಲೋಹಶಿಲ್ಪಿ ಎ.ಗಿರಿರಾಜಾಚಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಲ್ಪಿ ತತ್ಪುರುಷ ಬ್ರಹ್ಮರ್ಷಿ ಜಯಂತ್ಯುತ್ಸವವನ್ನು ಶಿಲ್ಪಿ ವೃತ್ತಿನಿರತರು ಆಚರಿಸುವಲ್ಲಿ ಜಾಗೃತಿ ತೋರಬೇಕು ಎಂದು ಹೇಳಿದರು.
ಬಿ.ಎಂ.ನಾಗಭೂಷಣಯ್ಯಶಾಸ್ತ್ರಿ, ಟಿ.ಎಂ.ರುದ್ರಸ್ವಾಮಿ, ಮಹಾಂತೇಶ್, ಗಂಡಿ ನಾಗರಾಜ ನಾನಾ ಜಿಲ್ಲೆಗಳಿಂದ ವಧುವರರು, ಪಾಲಕ ಪೋಷಕರು ಪಾಲ್ಗೊಂಡಿದ್ದರು.