ಉಚಿತ ಮೂಳೆ ಸಾಂದ್ರತೆ ತಪಾಸಣೆ ಶಿಬಿರ
ಬಳ್ಳಾರಿ 20: ನಗರದಲ್ಲಿ ಇಂದು ಕಂಟೋನ್ಮೆಂಟ್ ಪ್ರದೇಶದ ವಿಮ್ಸ್ (ಓ.ಪಿ.ಡಿ) ಹತ್ತಿರದಲ್ಲಿರುವ ಅನುಷ್ಕಾ ಆಸ್ಪತ್ರೆಯ ವಾರ್ಷಿಕೋತ್ಸವ ನಿಮಿತ್ತವಾಗಿ ಅನುಷ್ಕಾ ಆಸ್ಪತ್ರೆಯ ವೈದ್ಯ ಡಾ. ಶ್ರೀನಿವಾಸ್ ಮತ್ತು ಡಾ. ಕೀರ್ತಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಷಣೆ ಶಿಬಿರ, ಮೂಳೆ ಸವೆತ ಮತ್ತು ಮೂಳೆಯ ಬಲಹೀನತೆಯ ತಪಾಸÀಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆಸ್ಪತ್ರೆಯ ವೈದ್ಯರಾದ ಡಾ. ಶ್ರೀನಿವಾಸ್ರವರು ಮಾಧ್ಯಮದವರೊಂದಿಗೆ ಮಾತನಾಡಿ, ಮೂಳೆ ತಪಾಷಣೆ ಮತ್ತು ಪರಿಕ್ಷೆಗಳಿಗೆ ಸುಮಾರು ಒಂದು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಇದನ್ನು ನಾವು ಇಂದಿನಿಂದ ಪ್ರತಿ ತಿಂಗಳು ಮೂರನೇ ಶನಿವಾರದಂದು ಸಂಪೂರ್ಣ ಉಚಿತವಾಗಿ ಪರೀಕ್ಷೆ ಮಾಡುತ್ತೇವೆ. ನಗರದ ಮತ್ತು ಸುತ್ತಮುತ್ತಲ ಗ್ರಾಮದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಎಲುಬು ಮತ್ತು ಕೀಲಿನ ಸಮಸ್ಯೆಯನ್ನು ಪರಿಹರಿಸಿ ಕೊಳ್ಳಬೇಕೆಂದರು. ಅಲ್ಲದೆ ಗರ್ಭಿಣಿ ಮಹಿಳೆಯರಿಗೆ ಸಂಪೂರ್ಣವಾಗಿ ಉಚಿತವಾಗಿ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ನೀಡಲಾಗುವುದೆಂದರು.