ಆಶಾ ಕಾರ್ಯಕರ್ತರಿಗೆ ಪೋಷಕತ್ವ ಅರಿವು ಕಾರ್ಯಕ್ರಮ
ಬಳ್ಳಾರಿ 23: ಡಾನ್ ಬೋಸ್ಕೋ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ದಿ. 23ರಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮರಿಸ್ವಾಮಿ ಮಠದಲ್ಲಿ ಆಶಾ ಕಾರ್ಯಕರ್ತರಿಗೆ ಪೋಷಕತ್ವ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪೋಷಕತ್ವ ಜಿಲ್ಲಾ ಸಂಯೋಜಕ ಗಣೇಶ್ ಮಾತನಾಡಿ ಮಕ್ಕಳ ಮಾರಾಟ ಅಪರಾಧ, ಮಕ್ಕಳನ್ನು ಮಾರುವವರಿಗೆ ಹಾಗೂ ಕೊಳ್ಳುವವರಿಗೂ ಬಾಲ ನ್ಯಾಯ ಕಾಯ್ದೆ ಸೆಕ್ಷನ್ 81ರ ಅನ್ವಯ 05 ವರ್ಷಗಳವರೆಗೆ ಸೆರೆಮನೆ ವಾಸದೊಂದಿಗೆ ರೂ. 01 ಲಕ್ಷದವರೆಗೆ ದಂಡ ವಿಧಿಸಬಹುದು, ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿ 3ವರ್ಷಗಳಿಗೆ ಕಡಿಮೆ ಇಲ್ಲದಂತೆ 7ವರ್ಷಗಳ ವರೆಗೂ ವಿಸ್ತರಣೆ ಮಾಡಲಾಗಿದೆ ಎಂದರು.ಪೋಷಕತ್ವ ಎಂದರೆ ಕಾನೂನಿನ ಪ್ರಕಾರ ಅನಾಥರು ಎಂದು ಪರಿಗಣಿಸಿದ ಮಕ್ಕಳು ಹಾಗೂ ಪರಿವಾರದ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕ ಪರಿವಾರದ ಮೂಲಕ ಸಿಗುವ ಕಾಳಜಿಯನ್ನು ಪೋಷಕತ್ವ ಎನ್ನುತ್ತಾರೆ. ಹಾಗೆಯೇ ಇದರ ಉದ್ದೇಶ ಸರಿಯಾದ ಪಾಲನೆ, ಪೋಷಣೆಯನ್ನು ಒಂದು ಪರಿವಾರದ ವ್ಯವಸ್ಥೆಯಲ್ಲಿ ಕಲ್ಪಿಸುವುದು. ಮಕ್ಕಳ ನಾಯ ಕಾಯ್ದೆ 2015ರ ಸೆಕ್ಷನ್ 44ರ ಪೋಷಕತ್ವ ಯೋಜನೆ ಅಡಿಯಲ್ಲಿ ಮಗುವಿನ ರಕ್ಷಣೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ಜೈವಿಕ ಕುಟುಂಬ ವಲ್ಲದ ಕುಟುಂಬಕ್ಕೆ ತಾತ್ಕಾಲಿಕ ಅಥವಾ ವಿಸ್ತರಿಸಲ್ಪಟ್ಟ ಅವರಿಗೆ 01 ವರ್ಷಕ್ಕೆ ಮೀರಿದ ಅವಧಿವರೆಗೆ ಮಗುವನ್ನು ಪೋಷಕತ್ವ ಯೋಜನೆ ಅಡಿಯಲ್ಲಿ ನಿಯೋಜನೆ ಮಾಡಬಹುದಾಗಿದ್ದು, ಆಸಕ್ತ ಪಾಲಕರಿಂದ ಅರ್ಜಿ/ಆಹ್ವಾನಿಸಲಾಗಿದ್ದು. ಸಮಗ್ರ ಮಕ್ಕಳ ರಕ್ಷಣೆ ಯೋಜನೆಯ ಅಧೀನದಲ್ಲಿ ಬರುವ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ 18 ವರ್ಷದೊಳಗಿನ ಮಕ್ಕಳಿಗಾಗಿ ಬಾಲನ್ಯಾಯ ಕಾಯ್ದೆ ಅಡಿ ಪೋಷಣೆ ಮತ್ತು ರಕ್ಷಣೆ ಕುರಿತು ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಕಚೇರಿ ಮಾರ್ಗದರ್ಶನದಂತೆ ಮಕ್ಕಳನ್ನು ದತ್ತುಗೆ ಪ್ರೋತ್ಸಾಹಿಸಲು ಅರ್ಜಿ ಕರೆಯಲಾಗಿದೆ ಸೂಕ್ತ ಮಕ್ಕಳನ್ನು ಪೋಷಕತ್ವ ಯೋಜನೆಯಡಿ ತೆಗೆದುಕೊಳ್ಳುಬಯಸುವ ಕುಟುಂಬಗಳು ಹಾಗೂ ಪಾಲಕರು ಮಕ್ಕಳ ಕುರಿತಾದ ಅವರ ಆಯ್ಕೆಯ ಮಾಹಿತಿಯ ಅರ್ಜಿಯನ್ನು ಅವಶ್ಯಕತೆ ಇರುವ ಪಾಲಕರು ಸಲ್ಲಿಸಬಹುದಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮರಿಸ್ವಾಮಿ ಮಠ ವೈದಾಧಿಕಾರಿಗಳು, ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.