ದುಷ್ಟರನ್ನು ನಾಶ ಮಾಡುವ ಶಕ್ತಿ ರೂಪಳೇ ಆದಿಶಕ್ತಿ: ಶಿವಾನಂದ್ ಮ್ಯಾಗೇರಿ
ಲೋಕದರ್ಶನ ವರದಿ
ಶಿಗ್ಗಾವಿ 28: ಅಷ್ಟಮದಗಳಿಂದ ಪರರಿಗೆಕಷ್ಟಕೊಡುವದುಷ್ಟರನ್ನು ನಾಶ ಮಾಡುವ ಶಕ್ತಿ ರೂಪಳೇ ಆದಿಶಕ್ತಿ, ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯ ಎಂಬ ಆರುಕೆಟ್ಟ ಗುಣಗಳನ್ನು ಮೆಟ್ಟಿನಿಂತ ಭಕ್ತರ ಪವಿತ್ರ ಹೃದಯದಲ್ಲಿ ಶ್ರೀದೇವಿ ಸದಾ ವಾಸವಾಗುತ್ತಾಳೆ ಎಂದು ಬಿಜೆಪಿ ತಾಲೂಕಾಅಧ್ಯಕ್ಷ ಶಿವಾನಂದ್ ಮ್ಯಾಗೇರಿ ಹೇಳಿದರು.
ತಾಲೂಕಿನ ಚಿಕ್ಕಬೆಂಡಿಗೆರಿ ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತವಾಗಿ ನಡೆದ ನವರಾತ್ರಿ ಶ್ರೀದೇವಿ ಪುರಾಣದಲ್ಲಿ ಪಾಲ್ಗೊಂಡುಮಾತನಾಡಿದಅವರು ನಂಬಿದ ಭಕ್ತರಿಗೆ ಸ್ತ್ರೀ ರೂಪವಾಗಿ ಭೂಮಿಯಾಗಿ ನೀರಾಗಿ ಗಾಳಿಯಾಗಿ ಅನ್ನಪೂರ್ಣಿಯಾಗಿ ಪಾರ್ವತಿ ಸರಸ್ವತಿಯಾಗಿ ಲಕ್ಷ್ಮಿಯಾಗಿ ಹೆತ್ತತಾಯಿಯಾಗಿ ಅಕ್ಕ-ತಂಗಿಯಾಗಿಅಜ್ಜಿಅಜ್ಜನಾಗಿ ಮಗುವಾಗಿ ಮಡದಿಯಾಗಿ ಮಕ್ಕಳ ರೂಪವಾಗಿ ಹತ್ತು ಹಲವಾರುರೂಪದಲ್ಲಿ ಶಕ್ತಿ ದಾತೆಯಾಗಿ ವರಗಳನ್ನು ದಯಪಾಲಿಸುತ್ತಾಳೆ ಸಮಾಜಘಾತುಕ ಶಕ್ತಿಗಳಿಗೆ ದುಷ್ಟ ವ್ಯಕ್ತಿಗಳಿಗೆ ದುರ್ಗಾಯಾಗಿ ಕಣ್ಣಿಗೆ ಕಾಣದ ಆಯುಧಗಳಿಂದ ನಾಶ ಮಾಡಿ ಸಮಾಜ ಶಾಂತಿ ಕಾಪಾಡುತ್ತಾಳೆ ಇವಳನ್ನು ನಂಬಿದ ಭಕ್ತರಿಗೆ ಸರ್ವ ಶಕ್ತಿ ರೂಪೀಣೆಯಾಗಿಅವರ ಸುಖ ದುಃಖಗಳಲ್ಲಿ ಭಾಗಿಯಾಗಿಅವರಜೀವನ ಶುದ್ಧಕು ಸದಾ ಸಂತೋಷವನ್ನು ನೆಲೆ ಊರಿಸುತ್ತಾಳೆ ಕಷ್ಟದಲ್ಲಿ ಸಿಲುಕಿದಾಗ ತಾಯಿಜಗನ್ಮಾತೆಯಾಗಿ ಬಂದು ಕಾಪಾಡುತ್ತಾಳೆ ರೋಗದಿಂದ ಮುಕ್ತ ಮಾಡುತ್ತಾಳೆ ಕಷ್ಟದಿಂದ ಸುಖ ನೀಡುತ್ತಾಳೆ ಅಶಕ್ತಿಯಿಂದ ಶಕ್ತಿ ನೀಡುತ್ತಾಳೆ ಅಂಧಕಾರದಿಂದ ಬೆಳಕು ದಯಪಾಲಿಸುತ್ತಾಳೆ ಅಸತ್ಯದಿಂದ ಸತ್ಯ ತೋರಿಸುತ್ತಾಳೆ ಮೃತ್ಯುವಿನಿಂದಅಮೃತತ್ವದಯಪಾಲಿಸುತ್ತಾಳೆ ಕಾರಣ ಮನುಷ್ಯರಾದ ನಾವೆಲ್ಲರೂ ಸತ್ಯ ನ್ಯಾಯ ನೀತಿಧರ್ಮದಅಡಿಯಲ್ಲಿ ನಮ್ಮವರುತಮ್ಮವರು ಹೆತ್ತವರು ಹಿರಿಯರನ್ನು ಗೌರವಿಸಿ ಪ್ರೀತಿ ಪ್ರೇಮ ನೀತಿಯಿಂದ ಬದುಕಲು ಕಲಿಸುವುದೇ ಶ್ರೀದೇವಿ ಚರಿತ್ರೆಎಂದರು.
ಸಾನಿಧ್ಯವನ್ನು ವೇದಮೂರ್ತಿ ಗದಗಯ್ಯನವರು ಸುರಗಿಮಠ ಪುರಾಣ ಪ್ರವಚನವನ್ನು.ಶಿವಾನಂದ ಮ್ಯಾಗೇರಿಅವರ ಶಿಷ್ಯ ಪುರಾಣ ಪ್ರವೀಣಕಲಾವಿದ ವೇದಮೂರ್ತಿ ಶಿವನಯ್ಯ ಸ್ವಾಮಿ ಸುರಗಿಮಠ ನೆರವೇರಿಸಿದರು ಪಠಣವನ್ನು ನಾಗರಾಜ್ ಬಡಿಗೇರ್ ಹಾಮೋನಿಯಂ ಕೃಷ್ಣಪ್ಪ ಬಡಿಗೇರತಬಲ ಪೀರ್ ಸಾಬ್ಯಾದುಸಾಬನವರ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗ್ರಾಮ ಪಂಚಾಯತಿ ಸದಸ್ಯರಾದಚಂಬಣ್ಣ ಮ್ಯಾಗೇರಿ.ರುದ್ರವ್ವ ನಂದೆಣ್ಣವರ ಆಶಿಮ ಪಟೇಲ.ಪಾಟೀಲ . ಮುಖ್ಯೋಪಾಧ್ಯಾಯ ಶಿ.ವಾಯ್ ಕಟ್ಟಿಗೌಡ್ರು ಮಂಜುನಾಥ್ ಬಡಿಗೇರ್ ಫಕ್ಕೀರಗೌಡ ಭರಮ್ಗೌಡರ್, ಮಲ್ಲಿಕಾರ್ಜುನ ಹಡಪದ್, ರವಿ ಬಿಶೆಟ್ಟಿ.ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮದ ಸಕಲ ಸದ್ಭಕ್ತರುತಾಯಂದಿರು ನೂರಾರು ಭಕ್ತರು ಹಾಜರಿದ್ದರು