ತಾಳಿಕೋಟಿ

ಸಿದ್ಧಲಿಂಗ ಶ್ರೀಗಳಿಂದ ಆಶೀರ್ವಾದ ಪಡೆದ ಮಾಜಿ ಸಚಿವ ನಾಡಗೌಡ

ಸಿದ್ಧಲಿಂಗ ಶ್ರೀಗಳಿಂದ ಆಶೀರ್ವಾದ ಪಡೆದ ಮಾಜಿ ಸಚಿವ ನಾಡಗೌಡ

ತಾಳಿಕೋಟಿ 06: ಭಾವೈಕ್ಯತೆಯ ಪ್ರತೀಕವಾದ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟೀನೀಡಿದ ಮಾಜಿ ಸಚಿವ ಸಿ.ಎಸ್‌. ನಾಡಗೌಡ (ಅಪ್ಪಾಜಿ) ಬಾಲಶಿವಯೋಗಿಗಳಾದ ಶ್ರೀ ಸಿದ್ಧಲಿಂಗ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು. 

ಜುಲೈ 4 ರಿಂದ 12 ರವರೆಗೆ ನಡೆಯುತ್ತಿರುವ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠಕ್ಕೆ ಭೇಟಿ ನೀಡಿದ ನಾಡಗೌಡರು ಮಹಾನ್ ಯೋಗಿಗಳಾದ ಲಿಂಗೈಕ್ಯ  ಖಾಸ್ಗತ ಹಾಗೂ ವಿರಕ್ತ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ  ಸಿದ್ಧಲಿಂಗ ಶ್ರೀಗಳನ್ನು ಸನ್ಮಾನಿಸಿದರು. 

ಶ್ರೀಮಠದ ಮುಖ್ಯಸ್ಥ  ಮುರಗೇಶ ವಿರಕ್ತಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ಪ್ರಭುಗೌಡ ಮದರಕಲ್ಲ, ಚಿನ್ನುಧನು ನಾಡಗೌಡ, ವಿಜಯಸಿಂಗ್ ಹಜೇರಿ, ಕಾರ್ತಿಕ ಕಟ್ಟಿಮನಿ, ಡಿ.ವಿ. ಪಾಟೀಲ, ಫಯಾಜ ಉತ್ನಾಳ, ಸಿದ್ದನಗೌಡ ಪಾಟೀಲ, ಸಂತೋಷ ಘಾವಡೆ, ಸಿದ್ದು ಬೆಳಗುಂಪಿ, ಆನಂದ ಹಜೇರಿ ಇದ್ದರು. 


ಸುದ್ದಿ ಓದಿ