ಬಳ್ಳಾರಿ

ಮಾಜಿ ಸಿ.ಎಂ.ಸಿದ್ದರಾಮಯ್ಯ ಕೊಡಲೇ ಬಹಿರಂಗ ಕ್ಷಮೆಯಾಚಿಸಿವಂತೆ ಬ್ರಾಹ್ಮಣ ಒಕ್ಕೂಟ ಒತ್ತಾಯ

ಮಾಜಿ ಸಿ.ಎಂ.ಸಿದ್ದರಾಮಯ್ಯ ಕೊಡಲೇ ಬಹಿರಂಗ ಕ್ಷಮೆಯಾಚಿಸಿವಂತೆ  ಬ್ರಾಹ್ಮಣ ಒಕ್ಕೂಟ ಒತ್ತಾಯ

ಬಳ್ಳಾರಿ 23. ದೇಗುಲಗಳಲ್ಲಿ ತಟ್ಟೆ ಕಾಸಿಗಾಗಿ ಅರ್ಚಕರು ಕಾಯುತ್ತಿರುತ್ತಾರೆ ಎಂದು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಪದಾಧಿಕಾರಿಗಳಾದ ಡಾ.ಬಿ.ಕೆ.ಸುಂದರ್, ಡಾ. ಶ್ರೀನಾಥ್ ಹಾಗೂ ಡಾ.ವಿದ್ಯಾಧರ್ ಕಿನ್ನಾಳ್ ಒತ್ತಾಯಿಸಿದ್ದಾರೆ. ಸಿದ್ಧರಾಮಯ್ಯ ಅವರ ಈ ಹೇಳಿಕೆ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿದಂತಾಗಿದೆ. 

ಸಭೆಯಲ್ಲಿ ವ್ಯಂಗ್ಯವಾಗಿ ಸಮುದಾಯವನ್ನ ಹಾಗೂ ಅರ್ಚಕರನ್ನು ಹಿಯ್ಯಾಳಿಸಿ ಮಾತನಾಡಿ, ನಂತರ ಇದು ನಾನು ತಮಾಷೆಗೆ ಹೇಳಿದೆ ಎಂದಿರುವುದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ. ಬ್ರಾಹ್ಮಣ ಸಮುದಾಯ ಶಾಂತಿ ಪ್ರೀಯ ಸಮುದಾಯವಾಗಿದೆ. ಯಾರಿಗೂ ತೊಂದರೆ ನೀಡದೇ, ಯಾರ ಬಗ್ಗೆಯೂ ಹೆಚ್ಚು ಮಾತನಾಡದೇ, ಇರುವ ಸಮುದಾಯದ ಅರ್ಚಕರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಕೂಡಲೇ ಸಿದ್ದರಾಮಯ್ಯ ಅವರು ಬಹಿರಂಗ ಕ್ಷಮೆಯಾಚಿಸಬೇಕು, ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಹೋರಾಟದ ಸ್ವರೂಪವೇ ಬದಲಾಗಲಿದೆ ಎಂದು ಎಚ್ಚರಿಸಿದ್ದಾರೆ. 

ಪೋಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅಪಮಾನ: ಧ್ರುವ ಸರ್ಜಾ ಅಭಿನಯದ ಪೋಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಲಾಗಿದ್ದು, ಕೂಡಲೇ ಚಿತ್ರದ ಈ ತುಣುಕುಗಳನ್ನು ರದ್ದು ಪಡಿಸಿ ಚನಲಚಿತ್ರವನ್ನು ಪ್ರದರ್ಶಿಸಬೇಕು, ನಿರ್ಲಕ್ಷಿಸಿದರೇ ಪ್ರತಿಭನೆಯ ಸ್ವರೂಪ ಬದಲಾಗಲಿದೆ. ಈ ಚಿತ್ರದಲ್ಲಿ ಇಡೀ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಲಾಗಿದೆ. ಚಲನಚಿತ್ರ ತಂಡದವರು ಇದನ್ನು ತೆಗೆದು ಹಾಕಿ ಬಹಿರಂಗ ಕ್ಷಮೆಯಾಚಿಸಿ ಚಿತ್ರವನ್ನು ಪ್ರದರ್ಶಿಸಬೇಕು, ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಬ್ರಾಹ್ಮಣ ಸಮುದಾಯವರು ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗಲಿದೆ. ಶಾಂತಿ ಪ್ರೀಯರಾದ ನಮ್ಮನ್ನು ಕೆಣಕಿದರೇ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿ ಓದಿ