ಹಗರಿಬೊಮ್ಮನಹಳ್ಳಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬ ನಿಮಿತ್ಯ ಅಹಿಂದ ವೇದಿಕೆಯಿಂದ ಆಹಾರಧಾನ್ಯ ವಿತರಣೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬ ನಿಮಿತ್ಯ ಅಹಿಂದ ವೇದಿಕೆಯಿಂದ ಆಹಾರಧಾನ್ಯ ವಿತರಣೆ

ಹಗರಿಬೊಮ್ಮಹಳ್ಳಿ. 2: ಕರೋನಾ ಸಂಕಷ್ಟದಲ್ಲಿ ವೃತ್ತಿನಿರತ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡು ‘ಘನಮಠೇಶ್ವರ ನಾಟ್ಯ ಸಂಘ’ ದ ಕಲಾವಿದರಿಗೆ ಅಹಿಂದ ನಾಯಕ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ 74ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಅಹಿಂದ ಐಕ್ಯತಾ ವೇದಿಕೆಯು ಗುರುವಾರ ಕಲಾವಿದರಿಗೆ ಆಹಾರಧಾನ್ಯ ವಿತರಣೆ ಮಾಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಬುಡ್ಡಿ ಬಸವರಾಜ ಮಾತನಾಡಿ ಸಿದ್ದರಾಮಯ್ಯನವರು ಕೇವಲ ಒಂದು ಜಾತಿಗೆ ಸೀಮಿತವಾಗಿರುವಂತಹ ವ್ಯಕ್ತಿಯಲ್ಲ, ಬಡವರ್ಗಕ್ಕೆ ‘ಅನ್ನಭಾಗ್ಯ’ ನೀಡಿದ ಅಹಿಂದ ನಾಯಕ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಂಗವಾಗಿ ಬಡ ಕಲಾವಿದರಿಗೆ ಸಿದ್ದರಾಮಯ್ಯನವರನ್ನು ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ತಾಲೂಕಿಗೆ ಬಂದಿರುವ ‘ಘನಮಠೇಶ್ವರ ನಾಟ್ಯ ಸಂಘ’ದ ಕಲಾವಿದರಿಗೆ ತುತ್ತಿನ ಚೀಲ ತುಂಬಿಕೊಳ್ಳಲು ಅಹಿಂದ ಐಕ್ಯತಾ ವೇದಿಕೆಯಿಂದ ಆಹಾರಧಾನ್ಯ ನೀಡುತ್ತಿದ್ದೇವೆ. ಇದು ಸಿದ್ದರಾಮಯ್ಯನವರ ಹುಟ್ಟುಹಬ್ಬದ ನೆನಪಿಗಾಗಿ ಎಂದು ಹೇಳುತ್ತಾ ನಾಟಕ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದರು.  

ರಾಜ್ಯ ಕುರುಬರ ಸಂಘದ ನಿರ್ದೇಶಕ ಮರಿ ರಾಮಪ್ಪ ಮಾತನಾಡಿ ಅಹಿಂದ ಐಕ್ಯತಾ ವೇದಿಕೆಯು ಇಂದು ಸಿದ್ದರಾಮಯ್ಯನವರ 74ನೆ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಪ್ರದರ್ಶನ ನೀಡುತ್ತಿರುವ ಘನಮಠೇಶ್ವರ ನಾಟ್ಯ ಸಂಘದ ಕಲಾವಿದರಿಗೆ ಫುಡ್ ಕಿಟ್ ನೀಡಲಾಗುತ್ತಿದೆ, ಮಾಜಿ ಮುಖ್ಯಮಂತ್ರಿ ಸಿದ್ದರಮಯ್ಯನವರು ಹಸಿದ ಹೊಟ್ಟೆಗಳಿಗೆ ಅನ್ನ ಭಾಗ್ಯ ನೀಡಿದ ಮಹಾನ್‌ವ್ಯೆಕ್ತಿಯಾಗಿದ್ದಾರೆ, ಯಾವುದೂ ಒಂದು ಜಾತಿ ಆಯಕಟ್ಟಿನಲ್ಲಿ ಕಾರ್ಯ ನಿರ್ವಹಿಸದೇ ಎಲ್ಲರೂ ಒಂದೆ ಎಂಬ ಭಾವನೆಯಿಂದ ಹತ್ತಾರು ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ಮುಟ್ಟಿಸಿದ ವ್ಯೆಕ್ತಿಯಾಗಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಅಂಗಡಿ ರಾಚಪ್ಪ, ವೀರಯ್ಯಸ್ವಾಮಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ಗುಲ್ಜಾರ್, ಚಿಂತ್ರಪಳ್ಳಿ ನಾಗರಾಜ, ಮದರ್‌ಸಾಬ್, ಹುಲ್ಮನಿ ಮಂಜುನಾಥ, ಬಿ.ನಾಗರಾಜ, ಕಂಬಳಿ ಜಂಬಣ್ಣ, ಕನಕಸೇನೆ ದೊಡ್ಡಬಸಪ್ಪ, ತುರಾಯಿ, ಇಸ್ಮಾಯಿಲ್, ನಾಟಕ ಕಂಪನಿಯ ಮಾಲೀಕರಾದ ಜ್ಯೋತಿ ಮಂಗಳೂರು, ಮಲ್ಲಪ್ಪ, ಕಲಾವಿದರಾದ ಪುಟ್ಟರಾಜು, ಸಂಕೇತ್ ಮಂಗಳೂರು ಇದ್ದರು. 


ಸುದ್ದಿ ಓದಿ