ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಬಳ್ಳಾರಿಯಲ್ಲಿ ಭವ್ಯ ಸ್ವಾಗತ
ಬಳ್ಳಾರಿ :ಸೆ ರಂದು ಆಂಧ್ರ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರ ಬಾಬು ನಾಯ್ಡು ರವರು ಬಂಡಿ ಮೋಟಿನ ಎಪಿಎಂಸಿ ಪ್ರದೇಶದ ಬೆಂಗಳೂರು ರಸ್ತೆ ಹತ್ತಿರ ಕಾಕರ್ಲತೋಟ ಮತ್ತು ಎಪಿಎಂಸಿಯಲ್ಲಿ ಆಗಮಿಸಿದ್ದರು. ಅಲಿವೇಲು ಸುರೇಶ್ ಹಾಗೂ ಅಭಿಮಾನಿಗಳು ಅಲ್ಲಿರುವಂತಹ ಜನರು ಆತ್ಮೀಯವಾಗಿ ಸ್ವಾಗತಿಸಿ ಮಾಲಾರೆ್ಣಯನ್ನು ಮಾಡಿದರು.
ಮಾಜಿ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು ತಮ್ಮನ್ನು ಸ್ವಾಗತ ಕೋರಲು ಬಂದಿರುವಂತಹ ಜನರನ್ನು ನೋಡಿ ಬಹಳ ಸಂತೋಷ ಪಟ್ಟರು. ನಗರದತ್ತ ಮೆರವಣಿಗೆ ಮೂಲಕ ಸಾಗಿದರು. ತರುವಾಯ ಬಳ್ಳಾರಿಯಲ್ಲಿ ಇದು ಕರ್ನಾಟಕದಲ್ಲಿ ಇಷ್ಟು ಜನ ನನ್ನ ಅಭಿಮಾನಿಗಳು ಇದ್ದಾರೆ ಅಂದರೆ ನಮಗೆ ಅಚ್ಚರಿ ಮೂಡಿಸುತ್ತಿದೆ ಎಂದು ನುಡಿದರು.
ನಂತರ ಜಿಲ್ಲಾ ಕೋರ್ಟ್ ಹತ್ತಿರವಿರುವ ಕಮ್ಮಾ ಭವನದ ಮುಂದುಗಡೆ ಎನ್ ಟಿ ರಾಮರಾವ್ರ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ಉದ್ಘಾಟನೆಯತ್ತ ಸಾಗಿದರು. ಅಲಿವೇಲು ಸುರೇಶ್ ಸಮಾಜ ಸೇವಕರು ಯುವ ಮುಖಂಡರು ಅಭಿಮಾನಿಗಳು ನಗರದ ಯುವಕರು ಇತರರು ಉಪಸ್ಥಿತರಿದ್ದರು.