ಮುದ್ದೇಬಿಹಾಳ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ರಚನೆ
ಮುದ್ದೇಬಿಹಾಳ 11: ಇಂದು ಮುದ್ದೇಬಿಹಾಳ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ 2024 -25 ನೇ ಸಾಲಿನ ಶಾಲಾ ಸಂಸತ್ ರಚಿಸಲಾಯಿತು.
ವಿಶೇಷವಾಗಿ ಈ ವರ್ಷ ಮಕ್ಕಳಿಗೆ ಇ.ವಿ.ಎಂ. ಮಷೀನ್ ಮುಖಾಂತರ ಮೊಬೈಲ್ ಆಪ್ ಸಹಾಯದಿಂದ, ಬ್ಯಾಲೆಟ ಯುನಿಟಿನ್ನಲಿ ಉಮೇದುವಾರರ ಪಟ್ಟಿ, ಮತದಾನ, ಮತಗಳ ಎಣಿಕೆ, ಫಲಿತಾಂಶ ಪ್ರಕಟಣೆ ಮಾಡಿಸಲಾಯಿತು. ಶಾಲಾ ಮಕ್ಕಳಿಗೆ ಲೋಕಸಭಾ, ವಿಧಾನಸಭಾ, ನಗರ ಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಂತೆ ಯಾವ ರೀತಿಯಾಗಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವದು, ದಿನಾಂಕಗಳನ್ನು ಮತ್ತು ಕಾರ್ಯಚಟುವಟಿಕೆ ಯಾವ ರೀತಿ ನಿರ್ವಹಿಸುತ್ತದೆಯೋ ಆ ಕಾರ್ಯರೂಪವನ್ನು ಸಂಪೂರ್ಣವಾಗಿ ವಿವರಣೆಯನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ. ಕೆರೂರ ಅವರು ಹಲವಾರು ಬಾರಿ ಗ್ರಾಮ ಪಂಚಾಯತಿಯ ಚುನಾವಣಾ ಅಧಿಕಾರಿಯಾಗಿ, ಮತು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಾಸ್ಟರ್ ತರಬೇತಿದಾರರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಮಕ್ಕಳೊಂದಿಗೆ ಸಂಪೂರ್ಣವಾಗಿ ಪ್ರೋಜೆಕ್ಟರ್ನಲ್ಲಿ ಕಂಟ್ರೋಲ್ ಯೂನಿಟ್, ವಿವಿ ಪ್ಯಾಡ್, ಮತ್ತು ಬ್ಯಾಲೆಟ್ ಯೂನಿಟ್ ಕಾರ್ಯವನ್ನು, ಕಂಟ್ರೋಲ್ ಯೂನಿಟ್ನಲ್ಲಿ ಬ್ಯಾಟರಿ ಸೆಕ್ಷನ್, ಕ್ಯಾಂಡಿಡೇಟ್ ಸೆಕ್ಷನ್, ರಿಸಲ್ಟ್ ಸೆಕ್ಷನ್, ಬ್ಯಾಲೆಟ್ ಸೆಕ್ಷನ್, ವಿ.ವಿ.ಪ್ಯಾಡ್ ಮತ್ತು ಬ್ಯಾಲೆಟ ಯೂನಿಟ ಜೋಡಿಸಿ ತಾವು ಚಲಾಯಿಸಿದ ಮತ ನೈಜ್ಯವಾಗಿ ಅವರಿಗೆ ಬೀಳುವುದು ಎನ್ನುವುದರ ಬಗ್ಗೆ ಅಣಕು ಮತದಾನ ಮಾಡಿ ತೋರಿಸುವುದರ ಮುಖಾಂತರ ಚುನಾವಣೆಯ ಕಾರ್ಯ ತಿಳಿಸಿಕೊಟ್ಟರು. ಎಲ್ಲ ಮಕ್ಕಳು ತುಂಬಾ ಉತ್ಸಾಹದಿಂದ ಸಂಪೂರ್ಣ ವಿಚಾರ ತಿಳಿದುಕೊಳ್ಳುವುದರ ಜೊತೆಗೆ ಲವಲವಕೆಯಿಂದ ಭಾಗವಹಿಸಿದ್ದರು. ಶಾಲೆಯ ಮುಖ್ಯ ಗುರುಗಳಾದ ಎಸ್.ವಿ.ಹಿರೇಮಠ್ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವಂತೆ ದಿನಾಂಕಗಳನ್ನು ತಿಳಿಸಿದರು. ಅದರಂತೆ 25 ಜೂನ್ ರಿಂದ ಜೂನ್ 29. 2024 ನಾಮಪತ್ರ ಸಲ್ಲಿಕೆ, ನಾಮಪತ್ರ ಜುಲೈ 1 ರಿಂದ ಜುಲೈ 3 ವರಗೆ ನಾಮಪತ್ರ ಹಿಂಪಡೆಯುವದು, ಅಂದೇ ಮಧ್ಯಾಹ್ನ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದು ಮತ್ತು ಚಿನ್ನೆಯನ್ನು ನೀಡುವುದು. ಜುಲೈ 5 . 2024 ರ ವರೆಗೆ ಉಮೇದುವಾರದಿಂದ ಮತ ಯಾಚನೆಗಾಗಿ ಪ್ರಚಾರ. ಜುಲೈ 6ರಂದು ಮತದಾನ, 7ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ಈ ರೀತಿಯಾಗಿ ಅನುಸೂಚನೆಯನ್ನು ಹೊರಡಿಸಲಾಗಿತ್ತು. ಅದರಂತೆ ಎಲ್ಲಾ ಕಾರ್ಯಕ್ರಮಗಳು ನಡೆದವು. ಒಟ್ಟು 11 ಶಾಲಾ ಸಂಸತ್ತು ಸ್ಥಾನಗಳಿಗೆ 25 ವಿದ್ಯಾರ್ಥಿಗಳು ನಾಮಪತ್ರವನ್ನು ಸಲ್ಲಿಕೆಯಾಗಿದ್ದವು, ಹಿಂಪಡೆಯುವ ಕೊನೆಯ ದಿನಾಂಕದಂದು ಇಬ್ಬರು ಉಮೇದುವಾರರು ನಾಮಪತ್ರವನ್ನು ಹಿಂಪಡೆದರು. 01 ಉಮೇದುದಾರರ ನಾಮಪತ್ರ ಅಪೂರ್ಣಗಾಗಿ ರದ್ದುಗೊಳಿಸಲಾಯಿತು. ಕೊನೆಯಲ್ಲಿ 22 ಉಮೇದುವಾರರು ಕಣದಲ್ಲಿ ಉಳಿದರು. ಒಟ್ಟು 116 ಮತದಾರ ಕರಡು ಪ್ರತಿಯನ್ನು ತಯಾರಿಸಲಾಗಿತ್ತು. ಮತದಾನದ ದಿನದಂದು ಅಣಕು ಮತದಾನವನ್ನು ಮಕ್ಕಳಿಂದ ಮಾಡಿಸಿ ತೋರಿಸಿದರು. ತದನಂತರ ಕಂಟ್ರೋಲ್ ಯೂನಿಟ್ನಲ್ಲಿ ರಿಸಲ್ಟ್ ಸೆಕ್ಷನ್ನಲ್ಲಿ- ಕ್ಲೋಸ್ ಮಾಡಿ ಅಣಕು ಮತದಾನ ಚಲಾಯಿಸಿದ ತಲಾ ಒಬ್ಬರಿಗೆ ಎರಡರಂತೆ 22 ಮತಗಳನ್ನು ಚಲಾಯಿಸಿದ್ದನ್ನು ದೃಢಪಡಿಸಿಕೊಂಡ ನಂತರ ಕ್ಲೀಯರ್ ಬಟನ್ ಅಮಿಕಿ ಪ್ರತಿಯೊಬ್ಬರಿಗೂ ಸೊನ್ನೆ ಮತಗಳು ದೃಢಪಡಿಸಿಕೊಂಡ ಮೇಲೆ ರಿಸಲ್ಟ್ ಸೆಕ್ಷನ್ ಲಾಕ್ ಮಾಡಿ ನೈಜ್ಯ ಮತದಾನ ಪ್ರಾರಂಭಿಸಲಾಯಿತು.
ಶಾಲೆಯ ಶಿಕ್ಷಕರಾದ ಕೆ ಎಸ್ ಚಟ್ಟಿ ಪ್ರೊಸೈಡಿಂಗ್ ಆಫೀಸರ್ ಆಗಿ, ರೇಣುಕವ್ವ ಎಸ್. ಬಿ. ಮೊದಲನೆಯ ಪೋಲಿಂಗ್ ಆಫೀಸರ್ ಆಗಿ, ತಬಸುಂ ಕಾಜಿ ಎರಡನೇ ಪೋಲಿಂಗ್ ಅಧಿಕಾರಿಯಾಗಿ, ಟಿ.ಎ.ನಾಗರಬಾವಡಿ ಮೂರನೇ ಪೋಲಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಒಟ್ಟು 116 ವಿದ್ಯಾರ್ಥಿಗಳು ಇದ್ದು ಅದರಲ್ಲಿ 96 ವಿದ್ಯಾರ್ಥಿಗಳು ಮತ ಚಲಾವಣೆ ಮಾಡಿದರು. ತದನಂತರ ಸಂಜೆ 5ಗಂಟೆಗೆ ಕ್ಲೋಸ್ ಬಟನ್ ಒತ್ತಿ ಮತದಾನ ಮುಕ್ತಾಯಗೊಳಿಸಲಾಯಿತು.
ದಿನಾಂಕ 7ರಂದು ಬೆಳಗ್ಗೆ 10:30 ಗಂಟೆಗೆ ಸರಿಯಾಗಿ ಮತ ಎಣಿಕೆಯ ಮುಹೂರ್ತನು ಫಿಕ್ಸ್ ಮಾಡಲಾಗಿತ್ತು, ಅದರಂತೆ ವೈ.ಎಸ್.ಮೊಘಲೈ ಮತ ಎಣಿಕೆ ಮೇಲ್ವಿಚಾರಕಾಗಿ, ಸಂತೋಷ್ ಬಿದರಿ ಮತ ಎಣಿಕೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ಎ.ಸಿ.ಕೆರೂರ ನೇತೃತ್ವದಲ್ಲಿ ಕಂಟ್ರೋಲ್ ಯೂನಿಟ್ ನಿರ್ವಹಣೆ ಮಾಡಲಾಯಿತು. ದಿನಾಂಕ 8ರಂದು ನೂತನ ಶಾಲಾ ಸಂಸತ್ತ 86 ಮತಗಳನ್ನು ಪಡೆದ 10ನೇ ತರಗತಿ ವಿದ್ಯಾರ್ಥಿನಿ ಸ್ವಾಲಿಹಾ ದೇಸಾಯಿ ನೂತನ ಶಾಲಾ ಸಂಸತ್ತಿನ ಪ್ರಧಾನ ಮಂತ್ರಿಯಾಗಿ, 76 ಮತಗಳನ್ನು ಪಡೆದ ಇಮ್ರಾನ ಬಾಗಲಕೋಟ ಉಪಪ್ರಧಾನ ಮಂತ್ರಿಯಾಗಿ, 73 ಮತಗಳನ್ನು ಪಡೆದ ಸಾನಿಯಾ ಶಿಕ್ಷಣ ಮಂತ್ರಿಯಾಗಿ, 63 ಮತಗಳನ್ನು ಪಡೆದಶಮೀಮ್ ನದಾಫ್ ಮಹಿಳಾ ಪ್ರತಿನಿಧಿಯಾಗಿ, 60 ಮತಗಳನ್ನು ಪಡೆದ ಬಿಬಿ ಆಯಿಶಾ ತೆಗ್ಗಿನಮನಿ ಆರೋಗ್ಯ ಮಂತ್ರಿಯಾಗಿ, 60 ಮತಗಳನನ್ನು ಪಡೆದ ಉಮ್ಮೇ ಕುಲಸುಮ ಮಮದಾಪೂರ ಶಾಲಾ ಉಸ್ತುವಾರಿ ಮಂತ್ರಿಯಾಗಿ, 59 ಮತಗಳನ್ನು ಪಡೆದ ಮುಸಬ್ಬಿಯಾ ಮುರಾಳ ಹಣಕಾಸು ಮಂತ್ರಿಯಾಗಿ, 55 ಮತಗಳನ್ನು ಪಡೆದ ಬಿಬಿ ಆಯಿಶಾ ಕಾಚಾಪೂರ ಸ್ವಚ್ಛತಾ ಮಂತ್ರಿಯಾಗಿ, 53 ಮತಗಳನ್ನು ಪಡೆದ ಮೆಹಬೂಬ್ಬಿ ದೊಡಮನಿ ಪ್ರವಾಸ ಮಂತ್ರಿಯಾಗಿ, 52 ಮತಗಳನ್ನು ಪಡೆದ ಮಿಸ್ಬಾ ಕೂಡಗಿ ಸಂಸ್ಕೃತಿಕ ಮಂತ್ರಿಯಾಗಿ ಪ್ರಮಾಣ ವಚನದ ಮೂಲಕ ರಚಿಸಲಾಯಿತು. ಎಲ್ಲಾ ಮಕ್ಕಳು ಆಸಕ್ತಿಯಿಂದ ಭಾಗವಹಿಸಿ ಸಂತೋಷವನ್ನು ಹಂಚಿಕೊಂಡರು.