ಉಚಿತ ಹೆಲ್ಮೆಟ್ ವಿತರಿಸಿ ಅಪಘಾತ ಜಾಗೃತಿ ಮೂಡಿಸಿದ ಅರಣ್ಯ ರಕ್ಷಕ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ಶಿರಗೇರಿ ಗೌಳಿದಡ್ಡಿಯಲ್ಲಿ ಗುರುವಾರ ಜರುಗಿದ ಸರಳ ಸಮಾರಂಭದಲ್ಲಿ ಕಲಕೇರಿ ಅರಣ್ಯ ರಕ್ಷಕ ದೇವರಾಜ ಆಡಿನ ಯುವಕರಿಗೆ ಉಚಿತ ಹೆಲ್ಮೆಟ್ ವಿತರಿಸಿ ಅಪಘಾತ ಜಾಗೃತಿ ಮೂಡಿಸಿದರು.
ಕಳೆದ ವರ್ಷ ಇದೆ ವೇಳೆಯಲ್ಲಿ ತಮಗೆ ಅಪಘಾತ ಸಂಭವಿಸಿತ್ತು. ಆ ಕಾರಣದಿಂದ ಜಾಗೃತಿ ಮೂಡಿಸಲು ಹೆಲ್ಮೆಟ್ ವಿತರಣೆ ಕಾರ್ಯ ಮಾಡುತ್ತಿದ್ದೇನೆ. ಪ್ರತಿ ವರ್ಷ ಹೆಲ್ಮೆಟ್ ವಿತರಣೆ ಮಾಡಿ ಅಪಘಾತ ಜಾಗೃತಿ ಮೂಡಿಸುವುದಾಗಿ ದೇವರಾಜ ಆಡಿನ ತಿಳಿಸಿದರು. ಈ ವೇಳೆ ಅರಣ್ಯ ರಕ್ಷಕರಾದ ಶ್ರೀಧರ ಭಜಂತ್ರಿ, ಅಮಿತ ಸಣ್ಣಕ್ಕಿ, ಮುಸ್ತಾಕ್ಅಲಿ ಒಂಟಿ ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.