ವಿಜಯಪುರ

ವಿಜಯಪುರದಲ್ಲಿ ಅರಣ್ಯ ಪ್ರದೇಶ ಶೇ.೨.೪ಕ್ಕೆ ಏರಿಕೆ: ಪ್ರಶಾಂತ್ ಪಿ.ಕೆ.ಎಂ

ವಿಜಯಪುರದಲ್ಲಿ ಅರಣ್ಯ ಪ್ರದೇಶ ಶೇ.೨.೪ಕ್ಕೆ ಏರಿಕೆ: ಪ್ರಶಾಂತ್ ಪಿ.ಕೆ.ಎಂ

ವಿಜಯಪುರ ೨೪: ಕಳೆದ ಹತ್ತು ವರ್ಷಗಳಲ್ಲಿ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನದ ಪರಿಣಾಮ ವಿಜಯಪುರದ ಅರಣ್ಯ ಪ್ರದೇಶವು ಶೇ.೦.೧೭ರಿಂದ ಶೇ.೨.೪ಕ್ಕೆ ಏರಿಕೆಯಾಗಿದೆ ಎಂದು ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ ಹೇಳಿದರು.

ಬೆಂಗಳೂರಿನ ಕರ್ನಾಟಕ ಟೆನ್ನಿಸ್ ಕ್ಲಬ್ ಸಭಾಂಗಣದಲ್ಲಿ ವಿಜಯಪುರ ವೃಕ್ಷೋಥಾನ್ ಕುರಿತು ಬೆಂಗಳೂರಿನ ಓಟಗಾರರಿಗಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸತತ ಬರಗಾಲ ಹಾಗೂ ಅಂತರ್ಜಲ ಕುಸಿತದಿಂದ ನಾಶವಾಗಿದ್ದ ಅರಣ್ಯ ಪ್ರದೇಶದಲ್ಲಿ ಇದೀಗ ನೀರಾವರಿ ಜೊತೆಗೆ ಅರಣ್ಯೀಕರಣಕ್ಕೂ ಆದ್ಯತೆ ನೀಡಲಾಗಿದೆ ಎಂದರು. ವೃಕ್ಷೋಥಾನ್ ಹೆರಿಟೇಜ್ ರನ್ ಕೇವಲ ಓಟವಲ್ಲ, ಎಲ್ಲ ವಯೋಮಾನದ ನಾಗರಿಕರು ಸೇರಿ ಆಚರಿಸುವ ಹಸಿರು ಹಬ್ಬವಾಗಿದೆ ಎಂದು ಹೇಳಿದರು. ಎನ್.ಇ.ಬಿ ಸ್ಪೋರ್ಟ್ಸ ಮುಖ್ಯಸ್ಥ ನಾಗರಾಜ ಅಡಿಗ ಮಾತನಾಡಿ, ವಿಜಯಪುರದಲ್ಲಿ ಮುಂದಿನ ದಿನಗಳಲ್ಲಿ ೪೨ ಕಿ.ಮೀ. ಪೂರ್ಣ ಮ್ಯಾರಥಾನ್ ಆಯೋಜಿಸಿದರೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ಬೆಂಗಳೂರು ರನ್ನಿಂಗ್, ಫಿಟ್ ಬಿಜ್, ಕಬ್ಬನ್ ಪಾರ್ಕ್ ರನ್ನರ್ಸ್ ಸೇರಿದಂತೆ ಹಲವು ರನ್ನಿಂಗ್ ಗ್ರುಪ್ಗಳ ಸದಸ್ಯರು ಡಿಸೆಂಬರ್ ೧೩, ೨೦೨೬ರಂದು ವಿಜಯಪುರದಲ್ಲಿ ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್ನಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಸುದ್ದಿ ಓದಿ