ಕಾಡಾನೆ ದಾಳಿ: ಗೋವಿನ ಜೋಳ ಬೆಳೆ ಹಾನಿ
ಮುಂಡಗೋಡ 31: ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಫಸಲುಬರಿತ ಗೋವಿನ ಜೋಳ ಬೆಳೆ ಹಾನಿ ಮಾಡಿದ ಘಟನೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ವಿಜಯಕುಮಾರ ಮಟ್ಟಿಮನಿ ಅವರಿಗೆ ಸೇರಿದ ಒಂದೂವರೆ ಎಕರೆ ಹಾಗೂ ಹನುಮಂತ ಮಟ್ಟಿಮನಿ ಅವರಿಗೆ ಸೇರಿದ ಒಂದೂವರೆ ಸೇರಿದಂತೆ 3 ಎಕರೆಯಲ್ಲಿ ಬೆಳೆದ ಫಸಲುಬರಿತ ಗೋವಿನ ಜೋಳವನ್ನು ತಿಂದು ತುಳಿದು ನಾಶ ಮಾಡಿವೆ. ಉತ್ತಮವಾಗಿ ಬೆಳೆದು ನಿಂತಿದ್ದ ಗೋವಿನ ಜೋಳ ಇನ್ನೇನು ಕಟಾವ ಮಾಡುವ ಹಂತದಲ್ಲಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತೆಂದು ಹಾನಿಗೊಳಗಾದ ರೈತರು ರೋದಿಸುತ್ತಿದ್ದಾರೆ.