ಮುಂದಗೋಡ

ಒಂಟಿ ಸಲಗದ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ

ಒಂಟಿ ಸಲಗದ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ

ಮುಂಡಗೋಡ:ತಾಲೂಕಿನ ಚವಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಬ್ಯಾನಳ್ಳಿ ಗ್ರಾಮದ ಗದ್ದೆಯಲ್ಲಿ ಗಾಯಗೊಂಡ ಒಂಟಿ ಸಲಗವೊಂದು ಶನಿವಾರ ಬೆಳಗ್ಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ.   

ಗೋವಿನಜೋಳದ ಗದ್ದೆಯಲ್ಲಿ ಬಂದಿದ್ದ ಕಾಡಾನೆಯನ್ನು ರೈತರು ಕಾಡಿನತ್ತ ಓಡಿಸುತ್ತಿದ್ದಾಗ ಗಾಯಗೊಂಡ ಆನೆ ನಡೆದಾಡಲು ಪ್ರಯಾಸ ಪಡುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ತಿಳಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಆ ಭಾಗದ ಕ್ಯಾತನಳ್ಳಿ, ಚವಡಳ್ಳಿ, ಗುಂಜಾವತಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ಪತ್ತೆಗಾಗಿ ಕೊಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.      

ಸುರೇಶ ಕುಳ್ಳೊಳ್ಳಿ, ವಲಯ ಅರಣ್ಯ ಅಧಿಕಾರಿ:ಕಾಡಾನೆ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು ಆನೆ ಪತ್ತೆಯಾದರೆ ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು. 


ಸುದ್ದಿ ಓದಿ