ಬಳ್ಳಾರಿ

ಭೂ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಲು ಒತ್ತಾಯ

ಭೂ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಲು ಒತ್ತಾಯ

ಬಳ್ಳಾರಿ ಫೆ 20: ಆರ್ಸೆಲದ ಮಿತ್ತಲ್ ಹಾಗೂ ಬ್ರಾಹ್ಮಣಿ ಸ್ಟೀಲ್ ಕಂಪನಿಗಳಿಗಾಗಿ ಭೂಮಿಯನ್ನು ಸ್ವಧೀನ ಪಡಿಸಿಕೊಂಡ ಭೂ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ. 

ಇಂದು ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ರೈತರು ತಮ್ಮ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು. ಆರ್ಸೆಲದ ಮಿತ್ತಲ್ ಹಾಗೂ ಬ್ರಾಹ್ಮಣಿ ಸ್ಟೀಲ್ ಕಂಪನಿಗಳಿಗಾಗಿ ಬಳ್ಳಾರಿ ಜಿಲ್ಲಾ ಬಳ್ಳಾರಿ ತಾಲೂಕಿನ ಕುಡುತಿನಿ, ವೇಣೆ ವೀರಾಪುರ, ಹರಗಿನ ಡೋಣಿ, ಕೊಳಗಲ್ಲು, ಎರಿಂಗಿಳಿಗೆ ಹಾಗೂ ಸಿದ್ಧಮ್ಮನ ಹಳ್ಳಿಗಳ ರೈತರ ಸುಮಾರು 10,000 ಎಕರೆ ಜಮೀನುಗಳನ್ನು 2010 ರಲ್ಲಿ ಅಕ್ರಮವಾಗಿ ಹಾಗೂ ಬಲವಂತವಾಗಿ ಸ್ವಾಧೀನ ಪಡಿಸಿಕೊಂಡು ರೈತರನ್ನು ಎರಡು ರೀತಿಯಲ್ಲಿ ವಂಚಿಸಿರುವರು. ಇದು ಆಡಳಿತಕ್ಕೂ ತಿಳಿದ ವಿಷಯವಾಗಿದೆ. ಜಿಲ್ಲಾಧಿಕಾರಿಗಳು, 01-10-2010 ರಂದು ಬಳ್ಳಾರಿ ದೊಡ್ಡನಗೌಡ ರಂಗ ಮಂದಿರದಲ್ಲಿ ಮಿಥಲ್ ಸ್ಟೀಲ್ ಗಾಗಿ ಕರೆದ ಭೂ ಬೆಲೆ ನಿಗದಿಸುವ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಪೋಷಿಸಿದ ಭೂ ಬೆಲೆ ನಿಗದಿಸುವ ಸಭೆಯಲ್ಲಿ ಜಲ್ಲದಿಕಾರಿಗಳು ಘೋಷಿಸಿದ ಭೂ ಬೆಲೆಯ  8 ಲಕ್ಷ, 12 ಲಕ್ಷ ಹಾಗೂ 16 ಲಕ್ಷ ರೂ. ಬೆಲೆಗಳನ್ನು ರೈತರು ಒಕ್ಕೊರಲಿನಿಂದ ತಿರಸ್ಕರಿಸಿ  ಹೊರಬಂದಿದ್ದರು. ಮತ್ತು ನಂತರ  ಭೂ ಬೆಲೆ ನಿಗದಿಯಲ್ಲಿ ನಿಯಮಾವಳಿಗಳನ್ನು ಮೀರಿ ಅಕ್ರಮವಾಗಿ ರೈತರನ್ನು ವಂಚಿಸಿ  ಬೆಲೆ ನಿಗದಿಸಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ನಿರಂತರವಾಗಿ ರಚಿಸಿದರು. ಇದು ಕೂಡ ತಿಳಿದ ವಿಚಾರವಾಗಿದೆ. ಹಾಗೂ ಒಂದು ಎಕರೆ ಜಮೀನು 30 ಲಕ್ಷ 20,270 ರೂಪಾಯಿಗೆ ನಿಗದಿಪಡಿಸಿದ್ದಾರೆ. ಭೂಸ್ವಾಧೀನ ಆದ ನಂತರ ಆ ಜಮೀನಿನ ವಾರಸುದಾರರಲ್ಲಿ ಒಬ್ಬರನ್ನು ನೇಮಕಾತಿ ಮಾಡಿಕೊಂಡು ಸೌಲಭ್ಯ ಕಲ್ಪಿಸಿ ಕೊಡುತ್ತೇವೆ ಎಂದು ಹೇಳಿದರು. ಈಗಾಗಲೇ ಕೋರ್ಟಿನಲ್ಲಿ ಅಪಿಲೋ ಅದರಲ್ಲಿ ಪ್ರಮುಖವಾಗಿ 300 ಎಕರೆ ಜಮೀನು ಹಾಗೂ  ಹಾಗೂ 108 ಜನ ಫಲಾನುಭವಿಗಳು ಕೋರ್ಟಿಗೆ ಅಪಿಲೋ  ತೆಗೆದುಕೊಂಡು ಹೋಗಿದ್ದಾರೆ. ನಿರಂತರವಾಗಿ ನಾವು ಹೋರಾಟದಲ್ಲಿ ಇದ್ದಾಗ ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ನಮ್ಮ ಸಮಸ್ಯೆಗಳ ಕುರಿತು ಚರ್ಚೆ ಮಾಡಿದರು. ನಂತರ ಜಾತ್ಯಾತೀತ ಜನತಾದಳ ಪಾರ್ಟಿಯ ಎಚ್ ಡಿ ಕುಮಾರಸ್ವಾಮಿ ಅವರು ಬಂದು ನಾವು ನಡೆಸಿರುವಂತಹ ಧರಣಿಯಲ್ಲಿ ನ್ಯಾಯವಾಗುತ್ತಿವೆ ಎಂದು ಹೇಳಿದರು. ಅದೇ ರೀತಿಯಲ್ಲಿ ಶ್ರೀರಾಮುಲು ರವರು ಮುರುಗೇಶ್ ನಿರಾಣಿ ಅವರ ಸಮ್ಮುಖದಲ್ಲಿ ಮಾತನಾಡೋಣ ಎಂದು ನಮಗೆ ತಿಳಿಸಿದರು. ಆದರೂ ಸಹ ಇದುವರೆಗೆ ಯಾವುದೇ ರೀತಿಯ ಪರಿಹಾರ ಹೊಂದಿಲ್ಲ ಹಾಗೂ ಮಿಥಲ್ ಹಾಗೂ ಬ್ರಾಹ್ಮಣಿ ಸ್ಟೀಲ್ ಕಂಪನಿಗಳಿಗೆ ಬಲವಂತವಾಗಿ ಸ್ವಾಧೀನ ಪಡೆಸಿಕೊಂಡ ಭೂ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹಾಗೂ ಅಕ್ರಮ ಹೋಗಲಾಡಿಸಲು ಕರ್ನಾಟಕ ಪ್ರಾಂತ ರೈತ ಸಂಘಟನೆಯಿಂದ ಒತ್ತಾಯಿಸಿದರು. ಇಲ್ಲಿ ಪ್ರಮುಖವಾಗಿ ದೇವದಾಸಿ ಮಹಿಳೆಯರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದವರಿಗೆ ಅನ್ಯಾಯವಾಗಿರುವಂತಹ ಒಂದು ಪ್ರಮುಖವಾದ ವಿಷಯವಾಗಿದೆ.  

ಈ ಸಂದರ್ಭದಲ್ಲಿ ಸಂಪತ್ ಕುಮಾರ್, ನಳಿನಿ, ನಾಗದೇವ, ಬಸವರಾಜ್, ಜಂಬಣ್ಣ, ಲಕ್ಷ್ಮಣ, ಅಂಜಿನಪ್ಪ ಉಚ್ಚೆಯ, ಗೋಪಾಲ, ರೈತರು ಹಾಗೂ ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ