ಉಚಿತ ಬಿತ್ತನೆ ಬೀಜ, ರಸಗೊಬ್ಬರ ವಿತರಿಸುವಂತೆ ಒತ್ತಾಯ
ಲೋಕದರ್ಶನ ವರದಿ
ಶಿಗ್ಗಾವಿ 22: ಉಚಿತವಾಗಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ರೈತರಿಗೆ ವಿತರಿಸುವಂತೆ ಒತ್ತಾಯಿಸಿ ಸಿಎಂ ಮತ್ತು ಕೃಷಿ ಸಚಿವರಿಗೆ ಶಿಗ್ಗಾವಿ ತಹಶೀಲ್ದಾರ ಮುಖಾಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ಮನವಿ ಅರ್ಿಸಿ ಒತ್ತಾಯಿಸಲಾಯಿತು.
ಮಳೆಯಿಂದ ಅತಿವೃಷ್ಟಿ ಅನಾವೃಷ್ಟಿಯಿಂದ ಮುಂಗಾರು ಹಂಗಾಮಿನ ಬೆಳೆಯು ಸಂಪೂರ್ಣ ನಾಶವಾಗಿದ್ದು ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತನಿಗೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನ ಖರೀದಿಸುವಷ್ಟು ಶಕ್ತಿ ರೈತನಿಗೆ ಇಲ್ಲವಾಗಿದೆ, ಆದ್ದರಿಂದ ರಿಯಾಯಿತಿ ದರವನ್ನು ಹೊರತು ಪಡಿಸಿ ರೈತನಿಗೆ ಉಚಿತವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನ ವಿತರಿಸುವಂತೆ ಮನವಿ ಮೂಲಕ ಒತ್ತಾಯಿಸಲಾಯಿತು.
ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮುತ್ತಪ್ಪ ಗುಡಗೇರಿ, ಶಂಕರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ಫಕ್ಕೀರಗೌಡ ಗಾಳಿಗೌಡ್ರ, ರುದ್ರಗೌಡ ಪಾಟೀಲ, ಈರಣ್ಣ ಸಮಗೊಂಡ, ಆನಂದ ಕೆಳಗಿನಮನಿ, ಹರೀಶ ಮೇಟಿ, ನಾಗರಾಜ ಆದ್ರಶಪ್ಪನವರ, ಬಸವರಾಜ ಬ್ಯಾಹಟ್ಟಿ, ಸಂತೋಷ ಚಾಕಲಬ್ಬಿ ಸೇರಿದಂತೆ ರೈತ ಮುಖಂಡರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.