ಬಳ್ಳಾರಿ

ನಿಮಗಾಗಿ ನಾವು ಸಂಸ್ಥೆಯಿಂದ ಹೊದಿಕೆ ಜೀವಕೆ ಯೋಜನೆ

ನಿಮಗಾಗಿ ನಾವು ಸಂಸ್ಥೆಯಿಂದ ಹೊದಿಕೆ ಜೀವಕೆ ಯೋಜನೆ

ಬಳ್ಳಾರಿ 12: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಬಳ್ಳಾರಿ ನಗರದಲ್ಲಿ ಸೂರಿಲ್ಲದ ಎಷ್ಟೋ ಮಂದಿ ಚಳಿಯ ರಾತ್ರಿಗಳನ್ನು ಬಹಳ ಕಷ್ಟಗಳಲ್ಲಿ ಕಳೆಯುತ್ತಿರುವುದನ್ನು ಗಮನಿಸಿ ಅಂತಹವರಿಗೆ ಹೊದ್ದುಕೊಳ್ಳಲು ಹೊದಿಕೆಯನ್ನು ನೀಡುವ ‘ಹೊದಿಕೆ ಜೀವಕೆ’ ಯೋಜನೆ ರೂಪಿಸಿಕೊಂಡು ರಾತ್ರಿ ಇಡೀ ನಗರದಲ್ಲಿ ಸಂಚರಿಸಿ 150 ಕ್ಕೂ ಹೆಚ್ಚು ಜನರಿಗೆ ಹೊದಿಕೆ ನೀಡಿ ಆಸರೆಯಾದರು.  

ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕರಾದ ಸುದರ್ಶನ್, ಸಂದೀಪ್, ನಾಗರಾಜ್, ಮೆಹಬೂಬ್ ಭಾಷ, ಹರೀಶ್ ರೆಡ್ಡಿ, ವಿನೋದ್, ಮಾರುತಿ, ಮಂಜುನಾಥ್, ವಿಶ್ವನಾಥ್, ಹೇಮಂತ್, ವಿರೇಶ್, ವಿನಯ್ ಉಪಸ್ಥಿತರಿದ್ದರು, ಹೊದಿಕೆ ನೀಡುವ ಕೆಲಸವೂ ಮೂರು ವರ್ಷಗಳಿಂದ ಮಾಡುತ್ತಿದ್ದು, ಇದೇ ವಾರದಲ್ಲಿ ಸಂಡೂರು,ಸಿರುಗುಪ್ಪ, ಹರಪನಹಳ್ಳಿ, ಹೊಸಪೇಟೆ, ಕೊಟ್ಟುರು, ಕೂಡ್ಲಿಗಿ, ಹಡಗಲಿ ಮತ್ತು ಇತರೆ ತಾಲೂಕುಗಳಲ್ಲಿ ವಿತರಣೆ ಕೆಲಸ ನಡೆಯುತ್ತದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ನಾಗರಾಜ್ ರವರು ತಿಳಿಸಿದರು. 


ಸುದ್ದಿ ಓದಿ