ಬಳ್ಳಾರಿ

ಅರ್ಚಕರಿಗೆ, ಅಜೀಂ ಪ್ರೇಮ್ಜಿ ಆಹಾರ ಧಾನ್ಯ ಕಿಟ್ ವಿತರಣೆ

ಅರ್ಚಕರಿಗೆ, ಅಜೀಂ ಪ್ರೇಮ್ಜಿ ಆಹಾರ ಧಾನ್ಯ ಕಿಟ್ ವಿತರಣೆ

ಲೋಕದರ್ಶನ ವರದಿ

 ಕಂಪ್ಲಿ 11: ಕರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ಧಾಮರ್ಿಕ ದತ್ತಿ ಇಲಾಖೆಯವತಿಯಿಂದ ತಾಲೂಕಿನ 61ನೋಂದಾಯಿತ ಅರ್ಚಕರಿಗೆ ಆಹಾರ ಧಾನ್ಯ ಕಿಟ್ಗಳನ್ನು ವಿತರಿಸಿದೆ ಎಂದು ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದರು.ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪಟ್ಟಣದ 10ಜನ ನೋಂದಾಯಿತ ಅರ್ಚಕರಿಗೆ ಆಹಾರ ಧಾನ್ಯ ಕಿಟ್ ವಿತರಿಸಿ, ಕುರುಗೋಡ್ ದೊಡ್ಡ ಬಸವೇಶ್ವರ ದೇವಸ್ಥಾನದವರು ರೂಪಿಸಿದ ಕಿಟ್ಗಳನ್ನು ವಿತರಿಸಿದೆ. ರೀಡ್ಸ್ ಸಂಸ್ಥೆಯಿಂದ ಕಂಪ್ಲಿ ತಾಲೂಕಿನ ಎಂಟು ಗ್ರಾಮಗಳ 20 ಸ್ವಸಹಾಯ ಮಹಿಳಾ ಗುಂಪುಗಳ 200ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಿಸಿದೆ ಎಂದು ಹೇಳಿದರು. ಕಂದಾಯ ನಿರೀಕ್ಷಕ ಎ.ಗಣೇಶ್, ಶಿರಸ್ತೆದಾರರಾದ ಪಂಪಾಪತಿ, ರೇಖಾಮಠ್, ವಿಎಗಳಾದ ಗಿರೀಶ್, ವಿಜಯಕುಮಾರ್, ರೀಡ್ಸ್ ಸಂಸ್ಥೆಯ ಕಾರ್ಯನಿವರ್ಾಹಕ ನಿದರ್ೇಶಕ ಸಿ.ತಿಪ್ಪೇಶಪ್ಪ ಇತರರಿದ್ದರು. 

ಅಜೀಂನಿಂದ ವಿತರಣೆ: ಅಜೀಂ ಪ್ರೇಮ್ಜಿ ಫೌಂಡೇಷನ್ವತಿಯಿಂದ ಕಂಪ್ಲಿ ಕೋಟೆಯ ಕಡು ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ಗಳನ್ನು ವಿತರಿಸಿದರು. ಸಿಆರ್ಪಿ ಜೆ.ಕೆ.ಮಂಜುನಾಥ್, ಶಿಕ್ಷಕರಾದ ಮರಿಯಪ್ಪ ನೆಲ್ಲೂಡಿ, ರೋಷನ್ ಜಮೀರ್ ಇತರರಿದ್ದರು.ಹೆಲ್ಪ್ ಲಿಂಕ್ನಿಂದ: ತಾಲೂಕಿನ ನೆಲ್ಲೂಡಿ ಕೊಟ್ಟಾಲ್ ಗ್ರಾಮದಲ್ಲಿ ಜನಸಹಾಯ ಕೆಸಿವಿಟಿ ಹೆಲ್ಪ್ಲಿಂಕ್ ಸಹಕಾರದೊಂದಿಗೆ ಕನರ್ಾಟಕ ಜನಶಕ್ತಿ, ಕನರ್ಾಟಕ ಮಾದಿಗರ ರಕ್ಷಣಾ ವೇದಿಕೆ ನೇತೃತ್ವದಲ್ಲಿ 17ಬಡ ಕುಟುಂಬಗಳಿಗೆ ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಇ.ಧನಂಜಯ, ರಾಮಾಂಜಿನಿ, ಅಶೋಕ್, ಗ್ಯಾರೇಜ್ ವಿನೋದ್, ಅಂಜಿನಿ, ಪೇಂಟರ್ ನೀಲಪ್ಪ, ಬಸವರಾಜ, ಚೇತನ್, ಬೆಳಗೋಡ್ ನಾಗರಾಜ್, ಕರಿಯಪ್ಪ ಗುಡಿಮನಿ, ವಸಂತರಾಜ ಕಹಳೆ ಸೇರಿ ಇತರರಿದ್ದರು 

ಸುದ್ದಿ ಓದಿ