ಶಿಗ್ಗಾವ್

ಭಾರತ ಗೆಲ್ಲಲು ನಾವು ನಮ್ಮ ನಮ್ಮ ಬೂತುಗಳನ್ನು ಗೆಲ್ಲಬೇಕು : ಅರುಣಕುಮಾರ

ಭಾರತ ಗೆಲ್ಲಲು ನಾವು ನಮ್ಮ ನಮ್ಮ ಬೂತುಗಳನ್ನು ಗೆಲ್ಲಬೇಕು : ಅರುಣಕುಮಾರ

ಶಿಗ್ಗಾವಿ 09: ಭಾರತ ಗೆಲ್ಲಲು ನಾವು ನಮ್ಮ ನಮ್ಮ ಬೂತುಗಳನ್ನು ಗೆಲ್ಲಬೇಕು ಎಂದು ಬಿಜೆಪಿ ಹಾವೇರಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್ ಹೇಳಿದರು. 

ಪಟ್ಟಣದ ನಗರದಲ್ಲಿ ನಡೆದ ಗ್ರಾಮ ಚಲೋ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಾವೆಲ್ಲರೂ ಕೇಂದ್ರ ಸರಕಾರದ ಮೋದಿಜಿ ಅವರ ಆಡಳಿತದಲ್ಲಿ ಜನಪರವಾಗಿ ಜಾರಿಗೊಂಡ ಯೋಜನೆಗಳನ್ನು ಕರಪತ್ರದ ಮೂಲಕ ಪ್ರತಿಯೊಬ್ಬರಿಗೂ ತಿಳಿಸುವ ಮೂಲಕ ಮತ್ತೊಮ್ಮೆ ಮೋದಿ ಸರಕಾರ ಎಂಬ ಘೋಷಣೆಯೊಂದಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮತ್ತೊಮ್ಮೆ ಮೋದಿಜಿಯವರನ್ನು ಪ್ರಧಾನಿ ಮಾಡೋಣ ಎಂದರು.  

ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಕ್ಷೇತ್ರದಾದ್ಯಂತ  ಬಸವರಾಜ್ ಎಸ್ ಬೊಮ್ಮಾಯಿ ಅವರು ಮಾಡಿದ ಅಭಿವೃದ್ಧಿ ಜೊತೆಗೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು ಮಾಡಿದ ಅಭಿವೃದ್ಧಿಯನ್ನು ಒಳಗೊಂಡು ಕೇಂದ್ರದ ಜನಪರ ರೈತ ಪರ ಮಹಿಳೆಯರ ಪರ ಯುವಕರ ಪರ ಬಡವರ ಪರ ಅಭಿವೃದ್ಧಿಪರ ಯೋಜನೆಗಳ ಮಾಹಿತಿ ನೀಡಿ ಇಡೀ ಪ್ರಪಂಚಕ್ಕೆ ಮಾದರಿಯ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿ ಐದು ನೂರು ವರ್ಷಗಳ ಹೋರಾಟದ ಪ್ರತಿಫಲವಾದ ಶ್ರೀರಾಮ ಮಂದಿರ ಸ್ಥಾಪನೆ ಮಾಡಿದ್ದು ಜೊತೆಗೆ ಕೋವಿಡ್ ಲಸಿಕೆ ನೀಡಿ ಸರ್ವರಿಗೂ ಸುರಕ್ಷತೆಯ ಬದುಕನ್ನು ನೀಡುವುದರ ಜೊತೆಗೆ ಅಂತ್ಯೋದಯ ಪರಿಕಲ್ಪನೆ ಯೊಂದಿಗೆ ಆಡಳಿತ ಮಾಡಿದೆ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಾವು ಮನೆ ಮನೆಗೆ ತೆರಳಿ ಕೇಂದ್ರ ಸರಕಾರದ ಮತ್ತು ಬಿಜೆಪಿ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಪ್ರತಿಯೊಬ್ಬರು ನರೇಂದ್ರ ಮೋದಿಜಿಯವರಾಗಿ ಪ್ರಚಾರ ಮಾಡಿ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮತ್ತೊಮ್ಮೆ  ನರೇಂದ್ರ ಮೋದಿಜಿ ಅವರನ್ನು ಪ್ರಧಾನಿಯನ್ನಾಗಿ ಮಾಡೋಣ ಎಂದರು. 

ಈ ಸಂದರ್ಭದಲ್ಲಿ ಮಂಡಳದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ನಾರಾಯಣಪುರ, ರೇಣುಕನಗೌಡ ಪಾಟೀಲ್,  ಗ್ರಾಮ ಚಲೋ ಸಂಚಾಲಕರಾದ ಮಲ್ಲಿಕಾರ್ಜುನ ಹಡಪದ್, ಮಂಜುನಾಥ್ ಮಿರ್ಜಿ, ಸಂತೋಷ್ ದೊಡ್ಡಮನಿ,  ಹಾಗೂ ಬಿ.ಟಿ ಇನಾಮತಿ ಗೌಡ್ರು ರಾಜ್ಯ ಕಾರ್ಯಕಾರಿಣಿ ಸದಸ್ಯ ನರಹರಿ ಕಟ್ಟಿ , ವಿಸ್ತಾರಕ ವೀರೇಶ್ ಗದುಗಿನ ಶಿಗ್ಗಾವ್ ಹಾಗೂ ಬಂಕಾಪುರದ ಪುರಸಭೆಯ ಪ್ರತಿನಿಧಿಗಳು, ಭೂತ್ ಅಧ್ಯಕ್ಷರು, ಶಕ್ತಿ ಕೇಂದ್ರ ಮಹಾಶಕ್ತಿ ಕೇಂದ್ರದ ಪ್ರಮುಖರು, ಸಹ ಪ್ರಮುಖರು, ಮಂಡಲದ ಪದಾಧಿಕಾರಿಗಳು, ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪ್ರತಿನಿಧಿಗಳು, ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು. 


ಸುದ್ದಿ ಓದಿ