ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ: ನ್ಯಾ. ಅನುಪಮ
ಹಗರಿಬೊಮ್ಮನಹಳ್ಳಿ.ಅ.28 : ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ವಾಹನದ ಆಸರೆ ಪಡೆದುಕೊಂಡಿರುತ್ತೆವೆ, ಆ ವಾಹನಗಳಿಗೆ ತಕ್ಕಂತೆ ಚಾಲನಾ ಪರವಾನಿಗೆ, ತೆರಿಗೆ ಪಾವತಿಯ ಜೊತೆ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪಟ್ಟಣದ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಡಿ.ಅನುಪಮ ಕರೆ ನೀಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಗುರುವಾರ ತಾಲೂಕು ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ,ಆರಕ್ಷಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 75ನೇ ಆಜಾದಿಕಾ ಅಮೃತ್ ಮಹೋತ್ಸವ ಆಚರಣೆ,ಕಾನೂನು ಅರಿವು ನೆರೆವು,ಪ್ಯಾನ್ ಇಂಡಿಯಾ ಜಾಗೃತಿ ಮತ್ತು ವ್ಯಾಪ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಾರ್ವಜನಿಕರಿಗೆಲ್ಲರಿಗೂ ಸೇವ ಸೌಲಭ್ಯಗಳನ್ನು ನೀಡಲಾಗುತ್ತದೆ ಕೇವಲ ಒಬ್ಬರೆ ಅದನ್ನು ಪಡೆದುಕೊಂಡು ಉಳಿದವರಿಗೆ ಸಮಸ್ಯಾತ್ಮಕವಾಗಿ ವರ್ತಿಸದಂತೆ ಕರೆ ನೀಡಿದರು, ರಸ್ತೆಯನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಳ್ಳಬೇಕು ಅದನ್ನು ಬಿಟ್ಟು ರಸ್ತೆ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ರಸ್ತೆ ಸಂಚಾರಿಗಳಿಗೆ ತೊಂದರೆ ಉಂಟುಮಾಡಿದರೆ ಅದು ಉತ್ತಮ ನಾಗರೀಕರ ಲಕ್ಷಣವಲ್ಲವೆಂದರು. ವಾಹನಗಳ ಬಳಕೆ ಮಾಡುವುದರ ಜೊತೆ ಅದಕ್ಕೆ ಬೇಕಾದ ಚಾಲನಾ ಪರವಾನಿಗೆ,ವಾಹನಗಳ ತೆರಿಗೆ ಪತ್ರಗಳನ್ನು ಸಕಾಲದಲ್ಲಿ ಪಾವತಿಸಿ ಕಾನೂನು ಚೌಕಟ್ಟಿನಲ್ಲಿ ವಾಹನಗಳ ಚಾಲನೆ,ಪರವಾನಿಗೆಗಳ ಪಡೆಯುವಂತೆಸೂಚಿಸಿದರು.
ಪೋಲೀಸ್ ಇಲಾಖೆಯ ಪರಶುರಾಮ್ ಮಾತನಾಡಿ ಆರಕ್ಷಕರು ಸವಾರರನ್ನು ತಡೆಯುತ್ತಾರೆ ಹಾಗಾಗಿ ಚಾಲನಾ ಪರವನಿಗೆ ಪಡೆಯುವುದಲ್ಲ, ನಿಮ್ಮ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ, ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತಿರುತ್ತದೆ ಹಾಗೂ ಮನೆಯಿಂದ ಹೊರಗಡೆ ಹೋಗುತ್ತಿದ್ದಿರಿ ಎಂದರೆ ಮನೆಯ ಮುಖ್ಯಸ್ಥರು ಎಚ್ಚರವಾಗಿರಿ ಎಂಬ ಸಂದೇಶ ನೀಡುವುದು ಸರ್ವೆ ಸಾಮಾನ್ಯವಾಗಿದೆ ಹಾಗಾಗಿ ವಾಹನಗಳನ್ನು ಎಚ್ಚರದಿಂದ ಉಪಯೋಗಿಸುವಂತೆ ಸೂಚಿಸಿದರು.ಪ್ರತಿಯೊಬ್ಬರೂ ದ್ವಚಕ್ರ ವಾಹನ ಸವಾರರು ಹೆಲ್ಮೇಟ್ ಬಳಸುವಂತೆ ತಿಳಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ ತಳವಾರ ಮಾತನಾಡಿ ಪ್ರತಿಯೊಬ್ಬರೂ ಬೈಕ್ಗಳನ್ನು ಉಪಯೋಗಿಸುವ ಇಂದಿನ ದಿನಮಾನಗಳಲ್ಲಿ ವಾಹನಗಳಿಗೆ ಇನ್ಶೂರೆನ್ಸ್ ಸೇರಿದಂತೆ ಚಾಲನಾ ಪರವಾನಿಗೆ ಪಡೆಯುವುದು ಆಧ್ಯ ಕರ್ತವ್ಯೆವಾಗಿದೆ, ಇದರಿಂದಿ ನಿಮ್ಮನ್ನೆ ನಂಬಿದ ಕುಟುಂಬಕ್ಕೆ ಸಹಾಯವಾಗಲಿದೆ, ವಾಹನಗಳ ತೆರಿಗೆ ಪಾವತಿಯನ್ನು ಸೂಕ್ತ ಸಮಯದಲ್ಲಿ ಮಾಡಿಸಿಕೊಂಡರೆ ನಿಮಗೆ ಸೂಕ್ತ ಸೌಳಭ್ಯಗಳು ದೊರೆಯುತ್ತವೆ ಎಂದರು.
ಹೊಸಪೇಟೆ ಆರ್ಟಿಒ ವಸಂತ ಚೌಹಾಣ್ , ಹಿರಿಯ ವಕೀಲ ಅಶೋಕ ಕನಕೇರಿ, ವಿಷಾಲಾಕ್ಷಿ, ಇನ್ಸೂರೆನ್ಸ್ ಕಂಪನಿ ಅಧಿಕಾರಿ ಬ್ರಹ್ಮಾನಂದ ಮಾತನಾಡಿದರು.
ಈ ಸಂಧರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಭಾಗ್ಯಲಕ್ಷ್ಮೀ, ವಕೀಲ ಸಂಘದ ತಾಲೂಕಾಧ್ಯಕ್ಷ ಬಿ.ಬಸಪ್ಪ, ವಕೀಲ ಗಂಗಾಧರ, ಎನ್.ವೇಂಟೇಶ್ ನಾಯ್ಕ್, ನರೇಂದ್ರ ಬಾಬು, ಸುಭಾಶ್ ನಾಯ್ಕ್, ವಾಸು ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು.ವಕೀಲರಾದ ಚಂದ್ರ ಶೇಖರ್ ನಿರೂಪಿಸಿದರು, ವಾಸಂತಿ ಸಾಲ್ಮನಿ ಸ್ವಾಗತಿಸಿದರು. ಪಟ್ಟಣ ಸೇರಿದಂತೆ ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ಸಾರ್ವಜನಿಕರು ವಾಹನ ಚಾಲನಾ ಪರವಾನಿಗೆ ಪಡೆಯಲು ಹಾಗೂ ವಾಹನಗಳ ತೆರಿಗೆ ಪಾವತಿ ಮಾಡಲು ಬಂದಿದ್ದರು .