ಬಳ್ಳಾರಿ

ಜಾನಪದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ

ಜಾನಪದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ

ಲೋಕದರ್ಶನ ವರದಿ 

ಬಳ್ಳಾರಿ 04: ಸಿರುಗುಪ್ಪ ತಾಲ್ಲೂಕಿನ ಹಾಗಲೂರು ಗ್ರಾಮದಲ್ಲಿ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೋಟೇಶ್ವರರೆಡ್ಡಿ ಉದ್ಘಾಟಿಸಿದರು.  

 

ನಂತರ ಮಾತನಾಡಿದ ಅವರು, ಸಿನಿಮಾ, ಧಾರವಾಹಿಯಂತಹ ಪ್ರದರ್ಶನದಲ್ಲೂ ಗ್ರಾಮಸ್ಥರನ್ನು ಮನರಂಜಿಸುವ ಸಲುವಾಗಿ ಪುರಾತನ ಕಾಲದ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಿರುವ ನಾಟಕ, ಭಜನಾ, ಪುರಾಣ, ಬಯಲಾಟದಂತಹ ಜಾನಪದ ಕಲೆ ಗ್ರಾಮಗಳಲ್ಲಿ ನಡೆಯುವ ಹಬ್ಬ, ಜಾತ್ರೆ, ಉತ್ಸವ ಸಮಾರಂಭಗಳಲ್ಲಿ ಇಂತಹ ಜಾನಪದ ಕಲೆಯನ್ನು ಜೀವಂತವಾಗಿ ಉಳಿಸಿದೆ ಎಂದು ಹೇಳಿದರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ. ಕೆ.ಶಿವಲಿಂಗಪ್ಪ ಮಾತನಾಡಿ, ಮೊಬೈಲ್ ಹಾವಳಿಯ ಜಗತ್ತಿನಲ್ಲಿ ನಗದೀಕರಣದ ಹೆಸರಿನಲ್ಲಿ ನಮ್ಮ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮರೆಯಾಗುತ್ತಿವೆ. ವಿಶೇಷವಾಗಿ ಆಳಿವಿನ ಅಂಚಿನಲ್ಲಿರುವ ತೊಗಲುಗೊಂಬೆ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿನ ಜನರು ಜಾನಪದ ಹಬ್ಬಗಳು ನಡೆಯುತ್ತಾ ಕಲೆಯನ್ನು ಪ್ರೊತ್ಸಾಹಿಸುತ್ತಿದ್ದಾರೆನ್ನುವುದಕ್ಕೆ ಇಲ್ಲಿ ನೆನರೆದಿರುವ ಜನಸಮೂಹವೇ ಸಾಕ್ಷಿ ಎಂದರು. 

ತೊಗಲುಗೊಂಬೆ ಕಲಾವಿದ ಕೆ.ಹೊನ್ನೂರುಸ್ವಾಮಿ ಮಾತನಾಡಿ, ತೊಗಲುಗೊಂಬೆಯನ್ನು ಜೀವಂತವಾಗಿಸಲು ಗ್ರಾಮೀಣ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿರುವ ಬೆಂಬಲವೇ ಸಹಕಾರಿ ಎಂದು ತಿಳಿಸಿದರು. ಇದೇ ವೇಳೆ ಬಳ್ಳಾರಿಯ ಜಿಲಾನಿಬಾಷ ನಾಟ್ಯ ತಂಡದಿಂಂ ಆಕರ್ಷಕ ನೃತ್ಯ ಹಾಗೂ ಕೂಚುಪುಡಿ ನೃತ್ಯ ಕಾರ್ಯಕ್ರಮಗಳು ನೋಡುಗರನ್ನು ಮಂತ್ರಮುಗ್ದಗೊಳಿಸಿದವು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಲ್‌.ಮಲ್ಲಿಕಾರ್ಜುನರೆಡ್ಡಿ, ಪೋತಲಿಂಗನಗೌಡ, ಶಾಲೆಯ ಮುಖ್ಯ ಗುರು ಎಚ್‌.ಎಂ.ಪ್ರಕಾಶ್‌ಸ್ವಾಮಿ, ಮುಖಂಡರಾದ ಚಿರಂಜೀವಿರೆಡ್ಡಿ, ಅಂಬಣ್ಣ, ತಿಮ್ಮಪ್ಪ, ಗೋವಿಂದಪ್ಪ, ಜೆ.ಜನಾರ್ಧನರೆಡ್ಡಿ, ಬಿ.ಕೃಷ್ಣಪ್ಪ, ವಸಂತರೆಡ್ಡಿ ಎಂ.ಬಸವನಗೌಡ, ವಿರುಪನಗೌಡ, ಕೆ.ಸುಧಾಕರರೆಡ್ಡಿ, ವೀರೇಶ್, ಶಿವರಾಜ್, ವೈ.ಪ್ರಭು, ಮಧುಸೂಧನ್, ಕಾರ್ಯದರ್ಶಿ ಲಕ್ಷ್ಮಿದೇವಿ ಹೊನ್ನೂರುಸ್ವಾಮಿ ಸೇರಿದಂತೆ ಹಾಲಗೂರು ಮತ್ತು ಹೆಚ್‌.ಹೊಸಳ್ಳಿ ಗ್ರಾಮದ ಪಂಚಾಯಿತಿ ಸದಸ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ