ಜನಪದ ಕಲೆಯನ್ನು ಉಳಿಸಿ ಬೆಳೆಸು ಕಾರ್ಯ ಆಗಬೇಕು: ಡಾ. ಶ್ರೀಶೈಲ್
ಶಿಗ್ಗಾವಿ 05: ಜನಪದ ಕಲೆಗಳನ್ನು ಹಾಗೂ ರಂಗಭೂಮಿಯ ಕಲೆಗಳನ್ನು ಕಾಲಕ್ಕೆ ತಕ್ಕ ಹಾಗೆ ಪರಿಷ್ಕರಣೆ ಮಾಡುವುದು ಅನಿವಾರ್ಯ ಆ ನಿಟ್ಟಿನಲ್ಲಿ ಕಲೆಯನ್ನು ಉಳಿಸುವ ಕಲಾವಿದರನ್ನು ಬೆಳೆಸುವ ಕೆಲಸ ಆಗಬೇಕಾಗಿದೆ ಎಂದು ಡಾ. ಶ್ರೀಶೈಲ್ ಹುದ್ದಾರ ಹೇಳಿದರು.
ಪಟ್ಟಣದ ಶ್ರೀ ಗಾನಯೋಗಿ ಡಾ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಘ(ರಿ) ಸಂಯುಕ್ತಾಶ್ರಯದಲ್ಲಿ ನೆಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು
ಭಾ.ಜ.ಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ನಮ್ಮ ಉಸಿರು ಇರುವವರೆಗೂ ಹೆಸರು ಗಳಿಸುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಜನಪದ ಕಲಾವಿದರ ಶ್ರಮ ಬಹಳ ದೊಡ್ಡದು. ಹಾಗಾಗಿ ಇಂದು ಅವರ ಶ್ರಮಕ್ಕೆ ಪ್ರತಿಫಲವಾಗಿ ಈ ಪ್ರಶಸ್ತಿ ಗೌರವಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿದರು.
ನೂತನವಾಗಿ ಗ್ರಾಪಂಗೆ ಆಯ್ಕೆಯಾದ ಬಸನಗೌಡ ರಾಮನಗೌಡ್ರ, ನಾಗರಾಜ ಶಿಂಧೆ, ಕೋಟೆಪ್ಪ ಕಮ್ಮಾರ, ಹಿರಿಯ ಕಲಾವಿದ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಶಿಗ್ಗಾವಿ, ಅಮೆರಿಕದ ಉದ್ಯೋಗಿ ಕಲಾ ಆರಾಧಕಿ ಶೈಲಜಾ ಅವರನ್ನು ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಕೊಟ್ರೇಶ ಮಾಸ್ತರ ಬೆಳಗಲಿ, ಅಧ್ಯಕ್ಷ ಪಕ್ಕಿರೇಶ ಕೊಂಡಾಯಿ,ಪ್ರಾಧ್ಯಾಫಕ ಡಾ. ನಾಗರಾಜ ಎಸ್, ನಿರ್ದೇಶಕರಾದ ರಮೇಶ ಸಾತಣ್ಣವರ, ವಿರುಪಾಕ್ಷಪ್ಪ ಬಗಾಡೆ, ಶೇಖಪ್ಪ ಜೋಳದ, ಚಿನ್ನಪ್ಪ ಕುಂದಗೋಳ, ಎಸ್.ವಾಯ್.ಅಯ್ಯಣ್ಣವರ, ಈರಪ್ಪ ಚಿಂಚಲಿ ಸೇರಿದಂತೆ ತಾಲೂಕಿನ ಕಲಾವಿದರು ಉಪಸ್ಥಿತರಿದ್ದರು.
ಸನ್ಮಾನಿತರನ್ನು ಜಾನಪದ ಅಕಾಡೆಮಿ ಸದಸ್ಯ ಶಂಕರ ಅರ್ಕಸಾಲಿ ಪರಿಚಯಿಸಿದರು, ಶಿಕ್ಷಕ ಎಸ್.ವಿ.ಹೂಗಾರ ಸ್ವಾಗತಿಸಿದರೆ, ಪ್ರಾದ್ಯಾಫಕ ಶರೀಫ ಮಾಕಪ್ಪನವರ ನಿರೂಪಿಸಿದರು, ಅಶೋಕ ಹೊಸಮನಿ ವಂದಿಸಿದರು.