ಬಳ್ಳಾರಿ

ಫ್ಲಾಟ್ ಫಾರ್ಮ್‌ ಕಾಮಗಾರಿ ಶೀಘ್ರ ಆರಂಭ : ಸಂಸದ ದೇವೇಂದ್ರ​‍್ಪ

ಫ್ಲಾಟ್ ಫಾರ್ಮ್‌ ಕಾಮಗಾರಿ ಶೀಘ್ರ ಆರಂಭ : ಸಂಸದ ದೇವೇಂದ್ರ​‍್ಪ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 15: ಪಟ್ಟಣದ ರೈಲು ನಿಲ್ದಾಣದಲ್ಲಿ ಶೀಘ್ರವೇ ಫ್ಲಾಟ್‌ಫಾರ್ಮ್‌ ಕಾಮಗಾರಿ ಆರಂಭಿಸಲಾಗುವುದೆಂದು ಸಂಸದ ವೈ.ದೇವೇಂದ್ರ​‍್ಪ ತಿಳಿಸಿದರು. 

ಪಟ್ಟಣದಲ್ಲಿ ರೈಲ್ವೇ ಪ್ರಯಾಣಿಕರಹಿತರಕ್ಷಣ ಮತ್ತು ಅಭಿವೃಧ್ಧಿ ಸಮಿತಿಯ ಸದಸ್ಯರ ಮನವಿಗೆ ಸ್ಪಂದಿಸಿ ರೈಲ್ವೇ ಫ್ಲಾಟ್ ಫಾರ್ಮ್‌ ನಿರ್ಮಿಸುವಂತೆ ಈಗಾಗಲೇ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೇ ಮಹಾಪ್ರಬಂಧಕರು ತಿಳಿಸಿದ್ದಾರೆ, ಇದರಿಂದ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಫ್ಲಾಟ್‌ಫಾರ್ಮ್‌  ನಿರ್ಮಾಣವಾಗಲಿದೆ. 

ಹೊಸಪೇಟೆ-ಹರಿಹರ ರೈಲಿಗೆ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಎರೆಡು ಲಿಂಕ್ ಬೋಗಿಗಳ ಜೋಡಣೆ ಮತ್ತು ವಿಜಯಪುರ ಹಿಯಶವಂತಪುರ ರೈಲಿನ  ಪುನರಾರಂಬಕ್ಕೆ ಹುಬ್ಬಳ್ಳಿಯಲ್ಲಿ ನಡೆಯುವ ಇಲಾಖೆಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. 

ಈ ಸಂಧರ್ಭದಲ್ಲಿ ರೈಲ್ವೇ ಸಮಿತಿಯ ಸಂಚಾಲಕ ಹುಳ್ಳಿ ಪ್ರಕಾಶ್, ಕನ್ನಿಹಳ್ಳ ಚಂದ್ರಶೇಖರ್, ಚಿಂತ್ರಪಳ್ಳ ದೇವೇಂದ್ರ​‍್ಪ, ಬಡಿಗೇರ ಬಸವರಜ, ಬಾರಿಕರ ಬಾಪೂಜಿ, ಶಿವಶಂಕರಗೌಡ, ಬ್ಯಾಟಿ ನಾಗರಾಜ, ಬೆಣಕ್ಲು-್ಲ ಹನುಮಂತಪ್ಪ, ಹಂಪಾಪಟ್ಟಣ ಕುಬೇರ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ