ಅಂಚೆ ಕಚೇರಿ ಸಿಬ್ಬಂದಿಯಿಂದ ಧ್ವಜ ಮಾರಾಟ ಅಭಿಯಾನ
ಮುಂಡಗೋಡ 12: 77ನೇ ಸ್ವಾತಂತ್ರ್ಯೋತ್ಸವ ದಿನದ ನಿಮಿತ್ತ ತಾಲೂಕಿನ ಟಿಬೆಟಿಯನ್ ಕಾಲನಿಯ ಅಂಚೆ ಕಚೇರಿ ಸಿಬ್ಬಂದಿ ಶುಕ್ರವಾರ ಕ್ಯಾಂಪ್ ನಂ.3ರಲ್ಲಿ ಪ್ರಭಾತ ಪೇರಿ ನಡೆಸಿ ಧ್ವಜ ಮಾರಾಟ ಅಭಿಯಾನ ನಡೆಸಿದರು.
ಕ್ಯಾಂಪ್ ನಂ.3ರ ಮಾರುಕಟ್ಟೆಯಲ್ಲಿ ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಸೊಸೈಟಿ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ ಧ್ವಜಗಳನ್ನು ಮಾರಾಟ ಮಾಡಿ ಭಾರತದಲ್ಲಿ ನೆಲೆಸಿರುವ ನಿರಾಶ್ರಿತ ಟಿಬೆಟಿಯನ್ ನಾಗರಿಕರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೇ್ರಮದ ಕುರಿತು ಜಾಗೃತಿ ಮೂಡಿಸಿದರು.
ಈ ವೇಳೆ ಪೋಸ್ಟ್ ಮಾಸ್ಟರ್ ದಿನೇಶ ವೆರ್ಣೇಕರ, ರತ್ನಾಕರ ರಾಯ್ಕರ, ರೋಜಮ್ಮ ರಾಜು, ವೇದಾ ಆಚಾರಿ, ಆರತಿ ಪಾಟೀಲ, ಅಶೋಕ ಆಲೂರ ಮತ್ತು ಲತಾ ಹರಿಹರ ಭಾಗವಹಿಸಿದ್ದರು.