ಮುಂದಗೋಡ

ರಾಯಣ್ಣ ಅಭಿಮಾನಿ ಬಳಗದಿಂದ ಧ್ವಜಾರೋಹಣ ಕಾರ್ಯಕ್ರಮ

ರಾಯಣ್ಣ ಅಭಿಮಾನಿ ಬಳಗದಿಂದ ಧ್ವಜಾರೋಹಣ ಕಾರ್ಯಕ್ರಮ

ಲೋಕದರ್ಶನ ವರದಿ

ಮುಂಡಗೋಡ:74ನೇ ಗಣರಾಜ್ಯೋತ್ಸವದ ಪ್ರಯುಕ್ತ ತಾಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು.  

ಈ ವೇಳೆ ಅಯ್ಯಪ್ಪ ಭಜಂತ್ರಿ, ಅಶೋಕ ಚಲವಾದಿ, ಸಂತೋಷ ಸಣ್ಣಮನಿ, ಹನುಮಂತ ಭಜಂತ್ರಿ, ಶಿವಾನಂದ ಕುರುಬರ, ರಾಜು ಗುಬ್ಬಕ್ಕನವರ, ನಾಗರಾಜ ಶೆಟ್ಟಿ, ಮಂಜುನಾಥ ಕುರುಬರ, ಮಂಜುನಾಥ ಸಾಗರ, ರೇವಣು ಭಜಂತ್ರಿ, ಮಂಜುನಾಥ ರಾಣಿಗೇರ, ಗುಡ್ಡಪ್ಪ ಸುಣಗಾರ, ಬಸವರಾಜ ಭೋವಿ, ಕೃಷ್ಣ ಕುಂದರಗಿ, ರಮೇಶ ಬೋಕಿಯವರ ಹಾಗೂ ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ