ರಾಷ್ಟ್ರೊತ್ತಾನ ವಿಧ್ಯಾ ಕೇಂದ್ರ ಶಾಲೆಗೆ ಪ್ರಥಮ ಸ್ಥಾನ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ: ರಾಷ್ಟ್ರೊತ್ತಾನ ವಿಧ್ಯಾ ಕೇಂದ್ರ ರಾಮನಗರ ಈ ಶಾಲೆಯ ವಿದ್ಯಾರ್ಥಿನಿ,ಕುಮಾರಿ ಎ.ಎಮ್‌.ಎ.ಅನನ್ಯ ಹತ್ತನೆಯ ತರಗತಿಯ ಸಿ.ಬಿ.ಎಸ್‌.ಇ.ಪರೀಕ್ಷೆಯಲ್ಲಿ 96.4ಅ ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.ಇವರ ತಾಯಿ  ಕಲಾವತಿ ಬಿ.ಕಾಂ,ಎಮ್‌.ಎ. ಪದವಿಯ ಜೊತೆಗೆ ಡಿ.ಫಾರ್ಮಸಿ ಹಾಗೂ ಡಿ.ಎಮ್‌.ಎಲ್‌.ಟಿ ಅಭ್ಯಾಸಿಸಿದ್ದಾರೆ. ತಂದೆ ಎ.ಎಮ್‌.ಎ. ದಯಾನಂದ ಮೆಕಾನಿಕಲ್ ಡಿಪ್ಲೋಮಾ ಅಭ್ಯಾಸ ಮಾಡಿದ್ದಾರೆ. ಅಯ್ಯನಹಳ್ಳಿ ಮಠದ ಅಜ್ಜೊಳ ಫ್ಯಾಮಿಲಿಯಲ್ಲಿ ಬಹುತೇಕರು ವೈಧ್ಯಕೀಯ ಪದವೀಧರರಾಗಿದ್ದು, ಕುಮಾರಿ ಅನನ್ಯ ಕೂಡ ಪಿ.ಯು.ಸಿ.ನಂತರದಲ್ಲಿ ವೈದ್ಯಕೀಯ ಅಭ್ಯಾಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾಳೆ.